ಒಲಿಂಪಿಕ್ಸ್: ಬಾಕ್ಸರ್ ವಿಕಾಸ್ ಕ್ರಿಶನ್ ಗೆ ಸೋಲು

Update: 2021-07-24 11:47 GMT
 Photo: AFP

ಟೋಕಿಯೊ:ಭಾರತೀಯ ಬಾಕ್ಸರ್ ವಿಕಾಸ್ ಕ್ರಿಶನ್ ಪುರುಷರ ವೆಲ್ಟರ್ ವೇಟ್ 69 ಕೆಜಿ  ವಿಭಾಗದ 32ನೇ ಸುತ್ತಿನ ಸ್ಪರ್ಧೆಯಲ್ಲಿ 0-5 ಅಂತರದಿಂದ  ಸೋಲನುಭವಿಸಿ ಟೋಕಿಯೊ ಒಲಿಂಪಿಕ್ಸ್ ನಿಂದ ಹೊರಗುಳಿದಿದ್ದಾರೆ.

ಶನಿವಾರ ನಡೆದ  ಒಲಿಂಪಿಕ್ಸ್  ಕ್ರೀಡಾಕೂಟದ ಆರಂಭಿಕ ಸ್ಪರ್ಧೆಯಲ್ಲಿ ಸ್ಥಳೀಯ ನೆಚ್ಚಿನ ಬಾಕ್ಸರ್ ಸೆವೊನ್ರೆಟ್ಸ್ ಕ್ವಿನ್ಸಿ ಮೆನ್ಸಾ ಒಕಾಜಾವಾ ವಿರುದ್ದ ವಿಕಾಸ್ ಸೋತರು. ಒಕಾಜಾವಾ ಪಂಚ್ ಗೆ  ವಿಕಾಸ್  ಕಣ್ಣಿನಿಂದ ರಕ್ತ ಸೋರಲಾರಂಭಿಸಿದೆ.

ಒಂಬತ್ತು ಸದಸ್ಯರನ್ನು ಒಳಗೊಂಡಿರುವ ಭಾರತ ಬಾಕ್ಸಿಂಗ್ ತಂಡಕ್ಕೆ ವಿಕಾಸ್ ಸೋಲು ಸಂಪೂರ್ಣ ನಿರಾಶಾದಾಯಕ ಆರಂಭವಾಗಿದೆ.

ಹೈ-ವೋಲ್ಟೇಜ್ ಹಣಾಹಣಿಯಲ್ಲಿ 29 ರ ಹರೆಯದ ಕ್ರಿಶನ್ ಅವರ ಎಡಗಣ್ಣಿನ ಕೆಳಗೆ ಗಾಯವಾಗಿ ರಕ್ತ ಸೋರಲಾರಂಭಿಸಿದೆ. ವಿಕಾಸ್ ಒಲಿಂಪಿಕ್ಸ್ ಗೇಮ್ಸ್ ನ ಮೊದಲ ದಿನವಾದ ಶನಿವಾರ ಸ್ಪರ್ಧೆಯಲ್ಲಿದ್ದ  ಏಕೈಕ ಭಾರತೀಯ ಬಾಕ್ಸರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News