ಪ್ರೊ ಕಬಡ್ಡಿ ಲೀಗ್ : ಪಾಟ್ನಾ ಪೈರೇಟ್ಸ್ ನ್ನು ಮಣಿಸಿ ʼಪ್ರೊ ಕಬಡ್ಡಿ ಲೀಗ್ ಸೀಸನ್ 11ʼ ಗೆದ್ದ ಹರ್ಯಾಣ ಸ್ಟೀಲರ್ಸ್

Update: 2024-12-29 16:34 GMT

ಹೊಸದಿಲ್ಲಿ: ಪ್ರೊ ಕಬಡ್ಡಿ ಲೀಗ್-2024ರ ಫೈನಲ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಅನ್ನು ಸೋಲಿಸಿ ಹರ್ಯಾಣ ಸ್ಟೀಲರ್ಸ್ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಅನ್ನು ಗೆದ್ದುಕೊಂಡಿದೆ.

ಪ್ರೊ ಕಬಡ್ಡಿ ಲೀಗ್-2024ರ ಫೈನಲ್ ಪಂದ್ಯ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಲ್ಲಿ ನಡೆಯಿತು. ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಸೀಸನ್ 32-23 ರಿಂದ ಪಾಟ್ನಾ ಪೈರೇಟ್ಸ್ ಅನ್ನು ಸೋಲಿಸಿದೆ.

ಮನ್ಪ್ರೀತ್ ಸಿಂಗ್ ನೇತೃತ್ವದ ಕಬಡ್ಡಿ ತಂಡವು ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ ಒಂಬತ್ತು ಅಂಕಗಳ ಅಂತರದಿಂದ ಜಯಗಳಿಸಿದೆ. ಪ್ರೋ ಕಬಡ್ಡಿ ಲೀಗ್‌ ಗೆ ಪಾದಾರ್ಪಣೆ ಮಾಡಿದ ನಂತರ ಹರ್ಯಾಣ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಹರ್ಯಾಣದ ಶಿವಂ ಪತಾರೆ ಅವರು ಪಂದ್ಯದಲ್ಲಿ ಒಟ್ಟು 9 ಅಂಕಗಳನ್ನು ಗಳಿಸಿದ್ದು, ಇದು ಪ್ರೊ ಕಬಡ್ಡಿ ಲೀಗ್ ನಲ್ಲಿ ತಂಡವು ಮುನ್ನಡೆ ಸಾಧಿಸಲು ನೆರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News