ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ನಿರ್ಧಾರ ತೃಪ್ತಿ ತಂದಿದೆ: ಎಂ.ಎಸ್. ಧೋನಿ

Update: 2025-01-01 15:12 GMT

 ಎಂ.ಎಸ್. ಧೋನಿ | PC : PTI 

ಹೊಸದಿಲ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದಿರುವ ತನ್ನ ನಿರ್ಧಾರ ತೃಪ್ತಿ ತಂದಿದೆ ಎಂದು ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ನಿವೃತ್ತಿ ನಂತರದ ತನ್ನ ಜೀವನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಧೋನಿ, ನಿವೃತ್ತಿಯ ನಂತರ ನನಗೆ ಹೆಚ್ಚು ಸಮಯ ಸಿಗುತ್ತದೆ ಎಂದು ಭಾವಿಸಿದ್ದೆ. ಆದರೆ ಬೇಸರದ ವಿಚಾರವೆಂದರೆ ನನಗೆ ಹೆಚ್ಚು ಸಮಯ ಸಿಕ್ಕಿಲ್ಲ. ನಾನು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ವಂಚಿತನಾಗಿಲ್ಲ. ಏಕೆಂದರೆ ನಾನು ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇನೆ. ಒಮ್ಮೆ ನೀವು ನಿರ್ಧಾರ ತೆಗೆದುಕೊಂಡ ನಂತರ ಅದರ ಕುರಿತು ಯೋಚಿಸುವುದರಲ್ಲಿ ಅರ್ಥವಿಲ್ಲ. ನನ್ನ ದೇಶಕ್ಕಾಗಿ ಏನು ಮಾಡಿದ್ದೇನೆಯೋ ಅದರ ಬಗ್ಗೆ ನನಗೆ ಖುಷಿ ಇದೆ ಎಂದರು.

2020ರ ಆಗಸ್ಟ್ 15ರಂದು ಧೋನಿ ನಿವೃತ್ತಿಯಾದ ನಂತರ ಐಪಿಎಲ್ನಲ್ಲಿ ಚೆನ್ನೈಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಚೆನ್ನೈ ತಂಡ ಈ ತನಕ ಐದು ಬಾರಿ ಪ್ರಶಸ್ತಿ ಗೆಲ್ಲಲು ನೇತೃತ್ವವಹಿಸಿದ್ದಾರೆ. 43ನೇ ವಯಸ್ಸಿನ ಧೋನಿ ಅವರು ಈಗಲೂ ಸಿಎಸ್ಕೆ ತಂಡದ ಪ್ರಮುಖ ಆಟಗಾರನಾಗಿದ್ದು, ಐಪಿಎಲ್ 2025ರ ಹರಾಜಿಗಿಂತ ಮೊದಲು 4 ಕೋಟಿ ರೂ.ಗೆ ತಂಡದಲ್ಲೇ ಉಳಿಸಿಕೊಳ್ಳಲಾಗಿತ್ತು.

ಕ್ರಿಕೆಟ್ರಹಿತ ಜೀವನದ ಕುರಿತು ಮಾತನಾಡಿದ ಧೋನಿ, ಇದು ವಿನೋದಮಯವಾಗಿದೆ. ನಾನು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗಿದೆ. ನನ್ನ ವಿಶೇಷ ಹವ್ಯಾಸವಾದ ಮೋಟಾರ್ ಸೈಕಲ್ ಸವಾರಿಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಕುಟುಂಬದೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯಲು ಇದರಿಂದ ಸಾಧ್ಯವಾಗಿದೆ ಎಂದರು.

2019ರ ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ನಲ್ಲಿ ಸೋಲುವ ಮೂಲಕ ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯವಾಗಿದ್ದರೂ ತನ್ನ ಸಾಧನೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

15 ವರ್ಷಗಳ ವೃತ್ತಿಜೀವನದಲ್ಲಿ ಧೋನಿ ಅವರು ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭಾರತ ತಂಡದ ನಾಯಕತ್ವ ವಹಿಸಿದ್ದರು.

2021ರಲ್ಲಿ ಟಿ20 ವಿಶ್ವಕಪ್ನಲ್ಲಿ ಸಲಹೆಗಾರನಾಗಿ ಸ್ವಲ್ಪ ಸಮಯ ಕೆಲಸ ಮಾಡಿದ್ದ ಧೋನಿ ಅವರು ಸಿಎಸ್ಕೆ ಹಾಗೂ ಕ್ರಿಕೆಟ್ ಅನ್ನು ಮೀರಿದ ಬದುಕಿನತ್ತ ಗಮನ ಹರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News