ಸಿಡ್ನಿ ಪಂದ್ಯದಿಂದ ಹೊರಗುಳಿದ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ
ಸಿಡ್ನಿ: ಟೀಂ ಇಂಡಿಯಾದ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಶನಿವಾರ ನಿವೃತ್ತಿ ಕುರಿತು ವದಂತಿಗಳನ್ನು ತಳ್ಳಿ ಹಾಕಿದ್ದು, ನಾನು ನಿವೃತಿಯನ್ನು ಪಡೆದಿಲ್ಲ, ಬದಲಾಗಿ ಪಂದ್ಯದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ.
ಬ್ಯಾಟಿಂಗ್ ನಲ್ಲಿ ವಿಫಲತೆ ಎದುರಿಸಿದ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಜಸ್ ಪ್ರೀತ್ ಬುಮ್ರಾ ಹೇಳಿದ್ದರು. ಆದರೆ, ರೋಹಿತ್ ನಿವೃತ್ತಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವದಂತಿ ಹರಡಿತ್ತು.
ಈ ಕುರಿತು Star Sports ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ನಾನು ಎಲ್ಲಿಯೂ ಹೋಗುತ್ತಿಲ್ಲ, ನಾನು ನಿವೃತ್ತಿ ಪಡೆದಿಲ್ಲ. ನಾನು ಹಿಂದಕ್ಕೆ ಸರಿದಿದ್ದೇನೆ, ಅದನ್ನೇ ಹೇಳುತ್ತೇನೆ. ಮೂಲತಃ ನಾನು ಕೋಚ್ ಮತ್ತು ಆಯ್ಕೆದಾರರೊಂದಿಗೆ ನಡೆಸಿದ ಸಂಭಾಷಣೆಯು ಬಹಳ ಸರಳವಾಗಿತ್ತು. ನಾನು ಫಾರ್ಮ್ ನಲ್ಲಿಲ್ಲ, ನನಗೆ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ, ಇದು ಪ್ರಮುಖ ಪಂದ್ಯವಾಗಿದೆ ಮತ್ತು ಫಾರ್ಮ್ ಹೊಂದಿರುವ ಆಟಗಾರರ ಅಗತ್ಯವಿದೆ ಎಂದು ಹೇಳಿದ್ದಾರೆ.
ನನ್ನ ತಲೆಯಲ್ಲಿದ್ದ ವಿಚಾರವನ್ನು ಕೋಚ್ ಮತ್ತು ಆಯ್ಕೆದಾರರೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ. ನನ್ನ ನಿರ್ಧಾರವನ್ನು ಅವರು ಒಪ್ಪಿದರು. ನೀವು ಬಹಳ ವರ್ಷಗಳಿಂದ ಆಡುತ್ತಿದ್ದು, ನೀವು ಯಾವ ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂಬುದು ಗೊತ್ತಿದೆ ಎಂದು ಅವರು ಹೇಳಿದ್ದಾರೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳುವುದು ಸ್ವಲ್ಪ ಕಷ್ಟವಾಯಿತು. ಇದು ನಿವೃತ್ತಿ ನಿರ್ಧಾರವಲ್ಲ. ನಾನು ಆಟವನ್ನು ಬಿಡುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.