9 ವರ್ಷಗಳ ನಂತರ ಇಂಗ್ಲೆಂಡ್ ನಾಯಕತ್ವ ತ್ಯಜಿಸಿದ ಹೀದರ್ ನೈಟ್

Update: 2025-03-22 21:50 IST
Heather Knight

ಹೀದರ್ ನೈಟ್  | PC : NDTV 

  • whatsapp icon

ಲಂಡನ್: ಹೀದರ್ ನೈಟ್ ಸುಮಾರು 9 ವರ್ಷಗಳ ನಂತರ ಇಂಗ್ಲೆಂಡ್ನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನವನ್ನು ತೊರೆದಿದ್ದಾರೆ ಎಂದು ಇಂಗ್ಲೆಂಡ್, ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಶನಿವಾರ ಪ್ರಕಟಿಸಿದೆ.

ನೈಟ್ ಅವರು 2016ರಿಂದ ಇಂಗ್ಲೆಂಡ್ ಮಹಿಳಾ ತಂಡವನ್ನು 199 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಇದರಲ್ಲಿ 2017ರ ವಿಶ್ವಕಪ್ ಗೆಲುವು, ಇತರ ಎರಡು ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳೂ ಸೇರಿವೆ.

ಇಂಗ್ಲೆಂಡ್ ತಂಡದ ನಾಯಕಿಯಾಗಿ 134 ಪಂದ್ಯಗಳಲ್ಲಿ ಜಯಶಾಲಿಯಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ನಾಯಕಿಯರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಸತತ 8 ಏಕದಿನ ಸರಣಿಗಳನ್ನು ಜಯಿಸಿ ದಾಖಲೆ ನಿರ್ಮಿಸಿದ್ದ ತಂಡದ ನಾಯಕತ್ವವನ್ನು ವಹಿಸಿದ್ದರು.

ನೈಟ್ 2010ರಲ್ಲಿ ಇಂಗ್ಲೆಂಡ್ ತಂಡದ ಪರ ಚೊಚ್ಚಲ ಪಂದ್ಯ ಆಡಿದ್ದರು. 10 ವರ್ಷಗಳ ನಂತರ ಎಲ್ಲ 3 ಮಾದರಿಯ ಕ್ರಿಕೆಟ್ನಲ್ಲಿ ಶತಕ ಗಳಿಸಿದ ಇಂಗ್ಲೆಂಡ್ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News