ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡ ಜೋಫ್ರಾ ಆರ್ಚರ್

ಜೋಫ್ರಾ ಆರ್ಚರ್ | PC : PTI
ಹೈದರಾಬಾದ್: ರಾಜಸ್ಥಾನದ ವೇಗದ ಬೌಲರ್ ಜೋಫ್ರಾ ಆರ್ಚರ್ ತಪ್ಪು ಕಾರಣದಿಂದಾಗಿ ಐಪಿಎಲ್ ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಚರ್ ತನ್ನ 4 ಓವರ್ ಸ್ಪೆಲ್ ನಲ್ಲಿ ಒಂದೂ ವಿಕೆಟ್ ಪಡೆಯದೆ ಒಟ್ಟು 76 ರನ್ ನೀಡಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.
ಕಳಪೆ ಪ್ರದರ್ಶನದ ಮೂಲಕ ಆರ್ಚರ್ ಅವರು ಮೋಹಿತ್ ಶರ್ಮಾರ ದಾಖಲೆಯನ್ನು ಮುರಿದರು. ಮೋಹಿತ್ ಗುಜರಾತ್ ಟೈಟಾನ್ಸ್ ಪರ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್ಗಳಲ್ಲಿ 73 ರನ್ ಬಿಟ್ಟುಕೊಟ್ಟಿದ್ದರು. ಅದಕ್ಕೂ ಮೊದಲು 2018ರಲ್ಲಿ ಆರ್ಸಿಬಿ ವಿರುದ್ಧ ಹೈದರಾಬಾದ್ ತಂಡದ ಬಾಸಿಲ್ ಥಾಂಪಿ ತನ್ನ ಸ್ಪೆಲ್ನಲ್ಲಿ 70 ರನ್ ನೀಡಿದ್ದರು. ಇದೀಗ ಐಪಿಎಲ್ ಚರಿತ್ರೆಯಲ್ಲಿ ಅತ್ಯಂತ ದುಬಾರಿ ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಪವರ್ ಪ್ಲೇನ ಮೊದಲ ಓವರ್ ನಲ್ಲಿ ಆರ್ಚರ್ ರನ್ ನೀಡಲಾರಂಭಿಸಿದರು. ಟ್ರಾವಿಡ್ ಹೆಡ್ ಅವರು ಆರ್ಚರ್ ದಾಳಿಯನ್ನು ಪುಡಿಗಟ್ಟಿದರು.
►ಐಪಿಎಲ್ ನಲ್ಲಿ ಅತ್ಯಂತ ದುಬಾರಿ ಬೌಲರ್ ಗಳು
0/76-ಜೋಫ್ರಾ ಆರ್ಚರ್(ರಾಜಸ್ಥಾನ)-ಹೈದರಾಬಾದ್ ವಿರುದ್ಧ, ಹೈದರಾಬಾದ್, 2025
0/73-ಮೋಹಿತ್ ಶರ್ಮಾ(ಗುಜರಾತ್), ಡೆಲ್ಲಿ ವಿರುದ್ಧ, ಹೊಸದಿಲ್ಲಿ, 2024
0/70-ಬಾಸಿಲ್ ಥಾಂಪಿ(ಹೈದರಾಬಾದ್), ಆರ್ಸಿಬಿ ವಿರುದ್ಧ, ಬೆಂಗಳೂರು, 2018
0/69-ಯಶ್ ದಯಾಳ್(ಗುಜರಾತ್)-ಕೆಕೆಆರ್ ವಿರುದ್ಧ, ಅಹ್ಮದಾಬಾದ್, 2023
1/68-ರೀಸ್ ಟೋಪ್ಲೆ(ಆರ್ಸಿಬಿ), ಹೈದರಾಬಾದ್ ವಿರುದ್ಧ, ಬೆಂಗಳೂರು. 2024
1/68-ಲುಕ್ ವುಡ್(ಮುಂಬೈ), ಡೆಲ್ಲಿ ವಿರುದ್ದ, ಹೊಸದಿಲ್ಲಿ, 2024