ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ನ್ಯೂಝಿಲ್ಯಾಂಡ್

Update: 2025-03-24 22:05 IST
ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ನ್ಯೂಝಿಲ್ಯಾಂಡ್

PC : New Zealand Football/X

  • whatsapp icon

ಹೊಸದಿಲ್ಲಿ: ಓಶಾನಿಯ ಕನ್ಫೆಡರೇಶನ್ ಕ್ವಾಲಿಫೈಯಿಂಗ್ ಸರಣಿ ಫೈನಲ್‌ನಲ್ಲಿ ಸೋಮವಾರ ನ್ಯೂಝಿಲ್ಯಾಂಡ್ ತಂಡವು ನ್ಯೂ ಸೆಲಡೋನಿಯ ತಂಡವನ್ನು 3-0 ಗೋಲುಗಳಿಂದ ಸೋಲಿಸಿದೆ. ಇದರೊಂದಿಗೆ 2026ರ ಫುಟ್ಬಾಲ್ ವಿಶ್ವಕಪ್‌ ನಲ್ಲಿ ಆಡುವ ಅರ್ಹತೆಯನ್ನು ನ್ಯೂಝಿಲ್ಯಾಂಡ್ ಪಡೆದುಕೊಂಡಿದೆ.

ನ್ಯೂಝಿಲ್ಯಾಂಡ್ ವಿಶ್ವಕಪ್‌ಗೆ ಅರ್ಹತೆ ಪಡೆದಿರುವುದು ಇದು ಮೂರನೇ ಬಾರಿಯಾಗಿದೆ. ಇದಕ್ಕೂ ಮೊದಲು ಅದು 1982ರಲ್ಲಿ ಸ್ಪೇನ್‌ನಲ್ಲಿ ಮತ್ತು 2010ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗಳಿಗೆ ಅರ್ಹತೆ ಪಡೆದುಕೊಂಡಿತ್ತು.

53ನೇ ನಿಮಿಷದಲ್ಲಿ ನಾಯಕ ಕ್ರಿಸ್ ವುಡ್ ಪೃಷ್ಠ ಗಾಯದಿಂದಾಗಿ ಮೈದಾನದಿಂದ ಹೊರನಡೆದಾಗ ನ್ಯೂಝಿಲ್ಯಾಂಡ್ ಸಂಕಷ್ಟಕ್ಕೆ ಒಳಗಾಯಿತು. ಆಗ ಸ್ಕೋರ್ 0-0 ಸಮಬಲದಲ್ಲಿತ್ತು.

62ನೇ ನಿಮಿಷದಲ್ಲಿ ನ್ಯೂಝಿಲ್ಯಾಂಡ್ ಪರವಾಗಿ ಮೈಕಲ್ ಬಾಕ್ಸಲ್ ಮೊದಲ ಗೋಲು ಬಾರಿಸಿದರು. ಅದಾದ ನಾಲ್ಕು ನಿಮಿಷಗಳ ಬಳಿಕ, ಕೋಸ್ಟ ಬಾರ್ಬರೌಸಿಸ್, ಟಿಮ್ ಪೇನ್ ನೀಡಿದ ಪಾಸನ್ನು ಗೋಲು ಪೆಟ್ಟಿಗೆಗೆ ದಬ್ಬಿದರು. ತಂಡದ ಸ್ಕೋರ್ 2-0ಗೆ ಏರಿತು.

80ನೇ ನಿಮಿಷದಲ್ಲಿ ಎಲಿಜಾ ತಂಡದ ಮೂರನೇ ಗೋಲನ್ನು ಬಾರಿಸಿ ವಿಶ್ವಕಪ್‌ ನಲ್ಲಿ ನ್ಯೂಝಿಲ್ಯಾಂಡ್‌ ನ ಸ್ಥಾನವನ್ನು ಖಚಿತಪಡಿಸಿದರು.

ಪಂದ್ಯದ ಅರ್ಧವಿರಾಮದವರೆಗೆ ನ್ಯೂಝಿಲ್ಯಾಂಡನ್ನು 0-0 ಸಮಬಲದಲ್ಲಿರಿಸಿದ ನ್ಯೂ ಸೆಲಡೋನಿಯದ ಸಾಮರ್ಥ್ಯಕ್ಕೆ ಅಭಿಮಾನಿಗಳು ಬೆರಗಾದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News