IPL 2025 | ಕೆಕೆಆರ್ ವಿರುದ್ಧ ಫೀಲ್ಡಿಂಗ್ ಆಯ್ದುಕೊಂಡ ಆರ್ ಸಿ ಬಿ
Update: 2025-03-22 19:36 IST

ಕೋಲ್ಕತಾ : ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಲ್ ಟೂರ್ನಿಯ ಕೆಕೆಆರ್ ವಿರುದ್ಧದ ಪಂದ್ಯದಲ್ಲಿಆರ್ ಸಿ ಬಿ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ.
ಉದ್ಘಾಟನಾ ಪಂದ್ಯದ ಮೂಲಕ 18 ನೇ ಆವೃತ್ತಿಯ ಐಪಿಎಲ್ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಕಳೆದ ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆರ್ ಸಿ ಬಿ ತಂಡವನ್ನು ಎದುರಿಸಲಿದೆ.
ಉದ್ಘಾಟನಾ ಪಂದ್ಯಕ್ಕೂ ಮುಂಚೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ಶಾರೂಕ್ ಖಾನ್ ನಿರೂಪಣೆಯ ಮೂಲಕ ಐಪಿಎಲ್ ಗೆ ಮೆರುಗು ತುಂಬಿದರು. ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಕಂಚಿನ ಕಂಠದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ನಟಿ ದಿಶಾ ಪಟಾನಿ ಅವರು ನೃತ್ಯದ ಮೂಲಕ ರಂಜಿಸಿದರು.
Shreya Ghoshal, the melodic queen of India #IPL2025 #ShreyaGhoshal pic.twitter.com/VlfKWHte88
— OneCricket (@OneCricketApp) March 22, 2025