'ಸಡನ್ ಡೆತ್'ನಲ್ಲೂ ಡ್ರಾ | ಚೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಲ್ಸನ್, ಇಯಾನ್ ಜಂಟಿ ವಿಜೇತರು

Update: 2025-01-01 08:49 GMT

Photo credit: X/@FIDE_chess

ನ್ಯೂಯಾರ್ಕ್: ನ್ಯೂಯಾರ್ಕ್ನಲ್ಲಿ ಜಿದ್ದಾಜಿದ್ದಿನಿಂದ ಕೂಡಿದ ಫೈನಲ್ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ರಷ್ಯಾದ ಇಯಾನ್ ನಿಪೊಮ್ನಿಷಿ ನಡುವಣ ಪಂದ್ಯವು 2-2ರ ಅಂತರದಲ್ಲಿ ಡ್ರಾ ಕಂಡಿದೆ.

ಆ ಮೂಲಕ ಚೆಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರುಷರ ವಿಶ್ವ ಬ್ಲಿಟ್ಜ್ ಚಾಂಪಿಯನ್ಷಿಪ್ನಲ್ಲಿ ಇಬ್ಬರು ಸ್ಪರ್ಧಾಳುಗಳು ಚಾಂಪಿಯನ್ ಪಟ್ಟವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಬಳಿಕ ವಿಜೇತರನ್ನು ನಿರ್ಧರಿಸಲು 'ಸಡನ್ ಡೆತ್' ಗೇಮ್ ಆಡಿಸಲಾಯಿತು. ಅಲ್ಲೂ ಮೂರು ಬಾರಿ ಡ್ರಾ ಫಲಿತಾಂಶ ಬಂತು. ಪರಿಣಾಮ ಇಬ್ಬರೂ ಸ್ಪರ್ಧಾಳುಗಳು ಒಮ್ಮತದಿಂದ ಜಂಟಿ ಚಾಂಪಿಯನ್ ಪಟ್ಟ ಅಲಂಕರಿಸಲು ನಿರ್ಧರಿಸಿದರು.

ಚೆಸ್ ಇತಿಹಾಸದಲ್ಲೇ ಇದು ಅಪರೂಪದ ಫಲಿತಾಂಶ ಎಂದೇ ಬಣ್ಣಿಸಲಾಗಿದೆ. 'ದಿನವಿಡೀ ನಾವು ಹೋರಾಡಿದೆವು. ಅನೇಕ ಪಂದ್ಯಗಳನ್ನು ಆಡಿದೆವು. ಈಗಾಗಲೇ ಮೂರು ಡ್ರಾ ಫಲಿತಾಂಶ ಕಂಡಿದ್ದೇವೆ. ಇನ್ನೂ ಆಟವನ್ನು ಮುಂದುವರಿಸಬಹುದಿತ್ತು. ಆದರೆ ಪ್ರಶಸ್ತಿ ಹಂಚಿಕೊಳ್ಳುವುದು ಸೂಕ್ತ ಫಲಿತಾಂಶವೆನಿಸಲಿದೆ. ಪಂದ್ಯ ಮುಗಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೆಯಿಲ್ಲ' ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್ಸನ್ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News