ಬಂಡಿಪೋರ: ಭಯೋತ್ಪಾದಕರ ದಾಳಿ; ಇಬ್ಬರು ಪೊಲೀಸರು ಹುತಾತ್ಮ
ಹೊಸದಿಲ್ಲಿ, ಡಿ. 10: ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಶುಕ್ರವಾರ ಪೊಲೀಸರ ತಂಡವೊಂದರ ಮೇಲೆ ಶಂಕಿತ ಉಗ್ರರು ಗಂಡು ಹಾರಿಸಿದ ಪರಿಣಾಮ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.
ಈ ಘಟನೆ ಬಂಡಿಪೋರದ ಗುಲ್ಶನ್ ಚೌಕದಲ್ಲಿ ಸಂಜೆ ಸಂಭವಿಸಿದೆ. ಕೂಡಲೇ ಭದ್ರತಾ ಪಡೆ ಪ್ರದೇಶವನ್ನು ಸುತ್ತುವರಿಯಿತು ಹಾಗೂ ಉಗ್ರರ ವಿರುದ್ಧ ಶೋಧ ಕಾರ್ಯಾಚರಣೆ ಆರಂಭಿಸಿತು. ‘‘ ಗುಲ್ಶನ್ ಚೌಕ್ನಲ್ಲಿ ಪೊಲೀಸ್ ತಂಡದ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದರು. ಈ ಘಟನೆಯಲ್ಲಿ ಮುಹಮ್ಮದ್ ಸುಲ್ತಾನ್ ಹಾಗೂ ಫಯಾಜ್ ಅಹ್ಮದ್ ಗಾಯಗೊಂಡರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು’’ ಎಂದು ಕಾಶ್ಮೀರ ವಲಯದ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಈ ಘಟನೆಯನ್ನು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಖಂಡಿಸಿದ್ದಾರೆ.
#Terrorists fired upon a police party at Gulshan Chowk area of #Bandipora. In this #terror incident, 02 police personnel namely SgCT Mohd Sultan & Ct Fayaz Ahmad got injured & attained #martyrdom. Area cordoned off. Further details shall follow. @JmuKmrPolice
— Kashmir Zone Police (@KashmirPolice) December 10, 2021