ಬ್ಯಾರೀಸ್ ವೆಲ್ಫೇರ್ ಫೋರಮ್ ನಿಂದ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರಿಗೆ ಸನ್ಮಾನ
ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಮ್,ಅಬುಧಾಬಿ ಇದರ ವತಿಯಿಂದ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅವರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ಕೆಎಂಸಿಸಿ ಏರ್ಪಡಿಸಿದ ಸಮಾರಂಭದಲ್ಲಿ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಪ್ರದಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಅಭಿನಂದನಾ ಭಾಷಣ ಮಾಡಿದರು.
ಬಿಡಬ್ಲ್ಯೂಫ್ ನ ಪದಾಧಿಕಾರಿಗಳು ಸ್ಮರಣಿಕೆ ನೀಡಿ ಶಾಲು ಹೊದಿಸಿ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ, ಸಾಮಾಜಿಕ ಜೀವನ ಮತ್ತು ಪ್ರತಿಯೊಬ್ಬರಲ್ಲೂ ಇರಬೇಕಾದ ಸಾಮುದಾಯಿಕ ಬದ್ಧತೆಯ ಕುರಿತು ಶಾಸಕ ಅಶ್ರಫ್ ಮಾತನಾಡಿದರು. ನಾನು ಕೂಡಾ ಬ್ಯಾರಿ ಸಮುದಾಯಕ್ಕೆ ಸೇರಿದವ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು
ಬಿಡಬ್ಲ್ಯೂಫ್ ನ ಪದಾಧಿಕಾರಿಗಲಾದ ಹಮೀದ್ ಗುರುಪುರ್, ಅಬ್ದುಲ್ ರವೂಫ್, ಸಿದ್ದಿಕ್ ಕಾಪು, ಅಬ್ದುಲ್ ಮಜೀದ್, ಇಮ್ರಾನ್ ಅಹ್ಮದ್, ನವಾಜ್ ಅಹ್ಮದ್, ಮುಜೀಬ್ ಉಚ್ಚಿಲ್ ಮತ್ತು ಜಲೀಲ್ ಬಜ್ಪೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.