ಅಬುಧಾಬಿ ವಿಮಾನ ನಿಲ್ದಾಣಕ್ಕೆ ಡ್ರೋನ್ ದಾಳಿ: ಇಬ್ಬರು ಭಾರತೀಯರು ಸೇರಿದಂತೆ ಮೂವರು ಮೃತ್ಯು; ವರದಿ
Update: 2022-01-17 11:46 GMT
ಅಬುಧಾಬಿ: ಮುಸಫ್ಫಾ ಸಮೀಪದ ವಿಮಾನ ನಿಲ್ದಾಣ ಗುರಿಯಾಗಿಸಿ ಹೌದಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ಭಾರತೀಯರು ಹಾಗೂ ಓರ್ವ ಪಾಕಿಸ್ತಾನಿ ಪ್ರಜೆ ಮೃತಪಟ್ಟಿದ್ದಾರೆಂದು ಅಧಿಕೃತ ಹೇಳಿಕೆಗಳು ತಿಳಿಸಿವೆ. ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಮೂರು ತೈಲ ಟ್ಯಾಂಕರ್ ಗಳಿಗೆ ಡ್ರೋನ್ ಬಡಿದ ಪರಿಣಾಮ ಸ್ಫೋಟ ಉಂಟಾಗಿತ್ತು.