ಬ್ರಹ್ಮಗಿರಿ ವೃತ್ತಕ್ಕೆ ಆಸ್ಕರ್ ಫೆರ್ನಾಂಡಿಸ್ ಹೆಸರಿಡಲು ಮನವಿ

Update: 2022-01-19 13:52 GMT

ಉಡುಪಿ, ಜ.19: ಕೇಂದ್ರ ಸಚಿವರಾಗಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾಗಿದ್ದ ದಿ. ಆಸ್ಕರ್ ಫೆರ್ನಾಂಡೀಸ್ ಅವನ್ನು ಉಡುಪಿ ಜನತೆ ಸದಾ ನೆನಪಿಸಿಕೊಳ್ಳುವಂತೆ ನಗರದ ಬ್ರಹ್ಮಗಿರಿಯ ವೃತ್ತಕ್ಕೆ ಆಸ್ಕರ್ ಫೆರ್ನಾಂಡಿಸ್ ಸರ್ಕಲ್ ಎಂದು ಹೆಸರಿಡುವಂತೆ ಸಾರ್ವಜನಿಕರು ನಗರಸಭೆಗೆ ಮನವಿ ಮಾಡಿದ್ದಾರೆ.

ಇದರೊಂದಿಗೆ ಈ ಸರ್ಕಲ್‌ನಲ್ಲಿ ಆಸ್ಕರ್ ಫೆರ್ನಾಂಡೀಸ್ ಅವರ ಪುತ್ಥಳಿಯನ್ನೂ ಇರಿಸುವಂತೆ ಕಾಂಗ್ರೆಸ್ ಮುಖಂಡರಾದ ಜಯಶೆಟ್ಟಿ ಬನ್ನಂಜೆ ಹಾಗೂ ಗಣೇಶ್‌ರಾಜ್ ಸರಳೇಬೆಟ್ಟು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News