ನಾರಾಯಣಗುರು ಸ್ತಬ್ಧಚಿತ್ರ ತಿರಸ್ಕಾರ: ದಸಂಸ ಖಂಡನೆ
ಉಡುಪಿ, ಜ.22: ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಅವಕಾಶ ನೀಡದೆ ಅವಮಾನ ಮಾಡಿ ರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಶಾಖೆ ಜಂಟಿ ಹೇಳಿಕೆಯಲ್ಲಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ದಸಂಸ ರಾಜ್ಯ ಸಮಿತಿ ಸದಸ್ಯ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ, ಸಂತ, ಮಾನವತಾವಾದಿ, ಸಮಾಜ ಸುಧಾರಕ, ಹಿಂದುಳಿದ ವರ್ಗಗಳ ಮತ್ತು ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಮೇಲಕ್ಕೆ ತ್ತಿರುವ ನಾರಾಯಣ ಗುರುಗಳ ಪ್ರಭಾವಕ್ಕೆ ಅಂಬೇಡ್ಕರ್, ಸ್ವಾಮಿ ವಿವೇಕನಂದ ಮುಂತಾದವರು ಒಳಗಾಗಿದ್ದರು. ಇಂತಹ ಮಹಾನ್ ಸಂತ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಕೇರಳ ಸರಕಾರ ದೆಹಲಿ ಪೆರೇಡಿಗೆ ಕಳುಹಿಸಿದರೆ ಕೇಂದ್ರದ ಆಯ್ಕೆ ಸಮಿತಿಯಲ್ಲಿರುವ ಜಾತಿವಾದಿ ಮನಸ್ಸುಗಳು ತಿರಸ್ಕರಿಸಿರುವುದು ಶೋಷಿತ ಸಮಾಜಕ್ಕೆ ಮಾಡಿದ ಅಪಮಾನ ಎಂದು ಜಯನ್ ಮಲ್ಪೆ ಆರೋಪಿಸಿ ದ್ದಾರೆ.
ಆದುದರಿಂದ ಕೇಂದ್ರ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ವನ್ನು ದೆಹಲಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ದಲಿತ ನಾಯಕರಾದ ಮಂಜುನಾಥ ಗಿಳಿಯಾರು, ಹರೀಶ್ ಸಾಲ್ಯಾನ್, ದಯಾನಂದ ಕಪ್ಪೆಟ್ಟು, ವಾಸುದೇವ ಮುದ್ದೂರು, ರಾಜು ಬೆಟ್ಟಿನಮನೆ, ಗಣೇಶ್ ನೆರ್ಗಿ, ನಾಗರಾಜು ಉಪ್ಪುಂದ, ಗೀತಾ ಸುರೇಶ್, ನಾರಾಯಣ ಗುಂಡ್ಮಿ, ಪ್ರಭಾಕರ್ ಕುಂದಾಪುರ, ಸಂತೋಷ್ ಕಪ್ಪೆಟ್ಟು, ಗುಣವಂತ, ಪ್ರಸಾದ್, ಮಂಜುನಾಥ ಕಪ್ಪೆಟ್ಟು, ಲಕ್ಷ್ಮಣ ಬೈಂದೂರ್ ಒತ್ತಾಯಿಸಿ ದ್ದಾರೆ.