ವಿ.ಬಿ.ಹೊಸಮನೆ ಸಂಸ್ಮರಣ ಗ್ರಂಥ: ಅನುಭವ, ಮಾಹಿತಿ ನೀಡಲು ಮನವಿ

Update: 2022-01-22 13:59 GMT

ಉಡುಪಿ, ಜ.22: ಕವಿ, ಪತ್ರಕರ್ತ ಕಡೆಂಗೋಡ್ಲು ಶಂಕರ ಭಟ್ಟರ ಒಡನಾಡಿ ಯಾಗಿ ‘ಕಲಾದರ್ಶನ’ ಮಾಸಿಕ ಪತ್ರಿಕೆಯ ಸಂಪಾದಕರಾಗಿ, ಭಾರದ್ವಾಜ ಪ್ರಕಾಶನದಿಂದ ವೌಲಿಕ ಗ್ರಂಥಗಳನ್ನು ಪ್ರಕಟಿಸಿದ, ಅಧ್ಯಾಪಕರಾಗಿ ನಿವೃತ್ತಿ ಹೊಂದಿ ಮಂಗಳೂರಿನಲ್ಲಿ ನೆಲೆಸಿದ್ದ ದಿ. ವಿ.ಬಿ.ಹೊಸಮನೆ (ವೆಂಕಟರಮಣ ಭಟ್ಟ ಹೊಸಮನೆ) ಅವರ ಕುರಿತು ಪರಿಚಯಾತ್ಮಕ ಸಂಸ್ಮರಣ ಗ್ರಂಥವೊಂದನ್ನು ಹೊರತರಲು ‘ವಿ.ಬಿ.ಹೊಸಮನೆ ಸಂಸ್ಮರಣ ಸಮಿತಿ ಮಂಗಳೂರು’ ನಿರ್ಧರಿಸಿದೆ.

ಆ ಪ್ರಯುಕ್ತ ಅವರ ಕುರಿತು ಮಾಹಿತಿ, ಅನುಭವಗಳನ್ನು ಹೊಂದಿರುವವರು ಸಂಕ್ಷಿಪ್ತವಾಗಿ ಬರೆದು ಒಂದು ತಿಂಗಳೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊ ಡುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಳಾಸ: ಅಂಶುಮಾಲಿ, ಬಿಂದು ಪ್ರಕಾಶನ, 4-603 ನವಮಿ, 2-ಮಂಚಿಕೆರೆ ಮಣಿಪಾಲ-576104, ಉಡುಪಿ ಜಿಲ್ಲೆ. (ದೂರವಾಣಿ:9844923297)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News