ಉಡುಪಿ: ರವಿವಾರ 441 ಮಂದಿಗೆ ಕೋವಿಡ್ ಸೋಂಕು ದೃಢ, 1108 ಮಂದಿ ಗುಣಮುಖ

Update: 2022-01-30 14:31 GMT
ಸಾಂದರ್ಭಿಕ ಚಿತ್ರ (PTI)

ಉಡುಪಿ, ಜ.30: ರವಿವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆಯಲ್ಲಿ ಇನ್ನಷ್ಟು ಇಳಿಕೆ ಕಂಡುಬಂದಿದ್ದು, 441 ಮಂದಿಗೆ ಮಾತ್ರ ಕೊರೋನ ದೃಢಪಟ್ಟಿದೆ. ದಿನದಲ್ಲಿ 1108 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 4975ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 441 ಮಂದಿಯಲ್ಲಿ 210 ಮಂದಿ ಪುರುಷರು ಹಾಗೂ 231 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 241 ಮಂದಿ ಉಡುಪಿ ತಾಲೂಕಿಗೆ, 121 ಮಂದಿ ಕುಂದಾಪುರ ಹಾಗೂ 105 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದೊಬ್ಬರು ಹೊರಜಿಲ್ಲೆಯವರು.

ಪಾಸಿಟಿವ್ ಬಂದವರಲ್ಲಿ ಇಂದು ಯಾರನ್ನೂ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಿಲ್ಲ. 9 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 11 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 421 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಇಂದು 150 ಮಂದಿ ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ 9 ಮಂದಿ ವೆಂಟಿಲೇಟರ್, 24 ಮಂದಿ ಐಸಿಯು ಹಾಗೂ 35 ಮಂದಿ ಎಚ್‌ಡಿಯು ಚಿಕಿತ್ಸೆಯಲ್ಲಿದ್ದಾರೆ.

ಶನಿವಾರ 1108 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 10,677ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 3257 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 15519ಕ್ಕೇರಿದೆ.

36 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಕೇವಲ ಆರು ಮಂದಿ ಹಿರಿಯರು ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಅದೇ ರೀತಿ 15-18ವರ್ಷದೊಳಗಿನ ಯಾರೂ ಲಸಿಕೆ ಪಡೆದಿಲ್ಲ. ಉಳಿದಂತೆ 12 ಮಂದಿ ಮೊದಲ ಡೋಸ್ ಹಾಗೂ 18 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ರವಿವಾರ ಕೋವಿಡ್‌ಗೆ ಪಾಸಿಟಿವ್ ಬಂದ 441 ಮಂದಿಯಲ್ಲಿ 205 ಮಂದಿ 25 ವರ್ಷದೊಳಗಿನವರಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ. ಇವರಲ್ಲಿ 0-5ವರ್ಷದೊಳಗಿನ 8 ಮಂದಿ ಮಕ್ಕಳಿದ್ದಾರೆ.

ಉಳಿದಂತೆ 6-10 ವರ್ಷದೊಳಗಿನವರು 28, 11-15 ವರ್ಷದೊಳಗಿನ 37, 16ರಿಂದ 20ವರ್ಷದೊಳಗಿನ 100 ಹಾಗೂ 21ರಿಂದ 25 ವರ್ಷದೊಳಗಿನ 32 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದೂ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News