ವಾರದಲ್ಲಿ ಡ್ರಗ್ಸ್ ದಂಧೆ, ದನ ಕಳವು ಆರೋಪಿಗಳ ಪರೇಡ್: ಉಡುಪಿ ಎಸ್ಪಿ
Update: 2022-01-31 16:01 GMT
ಉಡುಪಿ, ಜ.31: ಕಳೆದ ಒಂದು ವಾರ ವಿವಿಧ ರೀತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ದಂಧೆ ಹಾಗೂ ದನ ಕಳವು ಆರೋಪಿಗಳ ಪರೇಡ್ ನಡೆಸಲಾಗಿದೆಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಲ್ಲಿ ಜಿಲ್ಲೆಯಾ ದ್ಯಂತ ಕಾರ್ಯಾಚರಣೆ ನಡೆಸಿ ಮಟ್ಕಾ, ಜುಗಾರಿ, ಕ್ಲಬ್‌ಗಳ ವಿರುದ್ಧ ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದರು.
ಕಾರ್ಕಳ ದನ ಕಳವು ಕಾರ್ಯಾಚರಣೆ ಸಂದರ್ಭ ಎಸ್ಸೈ ಸಹಿತ ಇಬ್ಬರು ಪೊಲೀಸರಿಗೆ ಗಾಯಗಳಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದರು.