ಸ್ಕಾರ್ಫ್ ವಿವಾದ ಸಂಘಪರಿವಾರದ ರಾಜಕೀಯ ಷಡ್ಯಂತರ: ಮುರ್ಶಿದ ಆರೋಪ
ಉಡುಪಿ, ಫೆ.2: ಹಿಜಾಬ್ ಮಹಿಳೆಯರ ಘನತೆ ಹಾಗೂ ರಕ್ಷಣೆಯ ಕವಚವಾಗಿದೆ. ಆದರೆ ಸಂಘ ಪರಿವಾರ ಇಂದು ತನ್ನ ರಾಜಕೀಯ ಷಡ್ಯಂತ್ರದ ಭಾಗವಾಗಿ ಮುಸ್ಲಿಂ ಮಹಿಳೆಯರ ಶಿಕ್ಷಣವನ್ನು ಮೊಟಕುಗೊಳಿಸುವ ಹುನ್ನಾರ ದೊಂದಿಗೆ ವಿವಾದ ಸೃಷ್ಠಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಆಯಿಷ ಮುರ್ಶಿದ ಆರೋಪಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ವಿಶ್ವ ಹಿಜಾಬ್ ದಿನಾಚರಣೆಯ ಅಂಗವಾಗಿ ಉಡುಪಿಯ ದುರ್ಗಾ ಇಂಟರ್ ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ಫೆ.1ರಂದು ಹಮ್ಮಿಕೊಳ್ಳಲಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ನಸೀಮ್ ಉಡುಪಿ ಹಾಗೂ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಮುಖಂಡರಾದ ಝಮ್ ಝಮ್ ಕಪ್ತಿ ಹಾಗೂ ನ್ಯಾಯವಾದಿ ಶಹನಾಝ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ನಿದಾ ಅಫ್ರಾ ಸ್ವಾಗತಿಸಿ, ಸುಹಾ ನಝ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.