ಇಳಿಜಾರಿನಲ್ಲಿ ಬಿದ್ದು ಮಹಿಳೆ ಮೃತ್ಯು
Update: 2022-02-02 15:44 GMT
ಬೈಂದೂರು, ಫೆ.2: ಇಳಿಜಾರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾಲ್ತೋಡು ಗ್ರಾಮದ ಹುಂತನಹೊಳೆ ಎಂಬಲ್ಲಿ ನಡೆದಿದೆ.
ಮೃತರನ್ನು ಹುಂತನಹೊಳೆ ನಿವಾಸಿ ರಾಮಯ್ಯ ಗೌಡ ಎಂಬವರ ಮಗಳು ಲಲಿತ(36) ಎಂದು ಗುರುತಿಸಲಾಗಿದೆ. ಇವರು ಜ.31 ರಂದು ಅಡಿಕೆ ಮರದ ಬುಡಕ್ಕೆ ತರಗೆಲೆಗಳನ್ನು ತರಲು ಹೋದವರು ಇಳಿಜಾರಿ ನಲ್ಲಿ ಅಕಸ್ಮಿಕವಾಗಿ ಜಾರಿ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.1ರಂದು ಬೆಳಗ್ಗೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.