ಬೈಂದೂರು; ಫೇಸ್‌ಬುಕ್‌ನಲ್ಲಿ ವೈದ್ಯರ ಬಗ್ಗೆ ಮಾನಹಾನಿ: ದೂರು
Update: 2022-02-02 15:49 GMT
ಬೈಂದೂರು, ಫೆ.2: ವೈದ್ಯರೊಬ್ಬರ ಬಗ್ಗೆ ಫೇಸ್‌ಬುಕ್ ಪೇಜ್‌ನಲ್ಲಿ ಮಾನಹಾನಿ ಮಾಡಿ ಪೋಸ್ಟ್ ಹಾಕಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಣ ಪೂಜಾರಿ ಎಂಬಾತ ಜ.22ರಂದು ಕಾಲ್ತೋಡು ಗ್ರಾಮದ ಸುಜಾತ ಕ್ಲಿನಿಕ್ ನಡೆಸುತ್ತಿರುವ ಡಾ.ಚಂದ್ರಶೇಖರ ಶೆಟ್ಟಿ(48) ಎಂಬವರ ವೈದ್ಯಕೀಯ ವೃತ್ತಿಯನ್ನು ಪ್ರಶ್ನಿಸಿ ಮತ್ತು ಅವರ ವೈದ್ಯ ವೃತ್ತಿಯನ್ನು ಅವಮಾನಿಸಿ ಅವರಲ್ಲಿ ಯಾರೂ ಚಿಕಿತ್ಸೆಯನ್ನು ಪಡೆದುಕೊಳ್ಳಬಾರದೆಂಬ ದುರುದ್ದೇಶದಿಂದ ಹೊಸ ಕಿರಣ ಎಂಬ ಹೆಸರಿನ ಫೇಸ್‌ಬುಕ್ ಪೇಜಿನಲ್ಲಿ ಮಾನ ಹಾನಿಮಾಡಿರುವುದಾಗಿ ದೂರಲಾಗಿದೆ.
ಈ ಮೂಲಕ ಡಾ.ಚಂದ್ರಶೇಖರ್ ಶೆಟ್ಟಿಗೆ ವೈದ್ಯಕೀಯ ವೃತ್ತಿ ಯನ್ನು ನಿರ್ವಹಿಸಲು ಅಡ್ಡಿಪಡಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.