ಯುಎಇನ ವಾಯುಕ್ಷೇತ್ರದೊಳಗೆ ನುಸುಳಿದ ಮೂರು ಡ್ರೋನ್ಗಳ ಧ್ವಂಸ

Update: 2022-02-03 18:31 GMT

ಅಬುದಾಭಿ,ಜ.21: ತನ್ನ ವಾಯುಕ್ಷೇತ್ರದೊಳಗೆ ಅಕ್ರಮವಾಗಿ ಪ್ರವೇಶಿಸಿದ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಯುಎಇ ಗುರುವಾರ ತಿಳಿಸಿದೆ.

ಗುರುವಾರ ನಸುಕಿನಲ್ಲಿ ಮೂರು ಶತ್ರು ಡ್ರೋನ್‌ಗಳು ಯುಎಇನ ಜನವಿರಳ ಪ್ರದೇಶದಲ್ಲಿರುವ ತನ್ನ ವಾಯುಕ್ಷೇತ್ರದೊಳಗೆ ನುಸುಳಿದ್ದು, ಅವುಗಳನ್ನು ತಡೆದು ನಾಶಪಡಿಸಲಾಗಿದೆ ’’ ಎಂದು ಯುಎಇನ ರಕ್ಷಣಾ ಸಚಿವಾಲಯವು ಬುಧವಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

 ದೇಶಕ್ಕೆ ಎದುರಾಗುವ ಯಾವುದೇ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ತಾನು ಸದಾ ಸಿದ್ಧನಿದ್ದೇನೆ ಹಾಗೂ ದೇಶವನ್ನು ಹಾಗೂ ಅದರ ಪ್ರಾಂತವನ್ನು ರಕ್ಷಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ತಾನು ಕೈಗೊಂಡಿರುವುದಾಗಿ ಯುಎಇನ ರಕ್ಷಣಾ ಸಚಿವಾಲಯ ತಿಳಿಸಿದೆ.

ಅಷ್ಟೇನೂ ಪರಿಚಿತವಲ್ಲದ ಇರಾಕಿ ಬಂಡುಕೋರ ಗುಂಪು ‘ಔಲಿಯಾ ಅಲ್ ವಾದ್ ಅಲ್-ಹಕ್’ ಈ ದಾಳಿಯ ಹೊಣೆಯನ್ನು ವಹಿಸಿಕೊಂಡಿದೆ. ಅಬುದಾಭಿಯ ಮಹತ್ವದ ಸ್ಥಾವರಗಳನ್ನು ಗುರಿಯಿರಿಸಿ ತಾನು ನಾಲ್ಕು ಡ್ರೋನ್‌ಗಳನ್ನು ಉಡಾಯಿಸಿದ್ದೇನೆ ಎಂದು ಅದು ಹೇಳಿಕೊಂಡಿದೆ. ಇರಾಕ್ ಹಾಗೂ ಯೆಮೆನ್ ಬಗ್ಗೆ ಯುಎಇ ನೀತಿಗಳನ್ನು ವಿರೋಧಿಸಿ ಈ ದಾಳಿಗಳನ್ನು ನಡೆಸಿದ್ದಾಗಿ ಅದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News