ಮಣಿಪಾಲ: ಡಿಜಿಟ್ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟನೆ
Update: 2022-02-10 16:27 GMT
ಮಣಿಪಾಲ, ಫೆ.10: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಣಿಪಾಲ ವಲಯದ ಮಣಿಪಾಲ ಕಾರ್ಯಕ್ಷೇತ್ರದಲ್ಲಿ ಡಿಜಿಟಲ್ ಸಾಮಾನ್ಯ ಸೇವಾಕೇಂದ್ರವನ್ನು ಉಡುಪಿ ನಗರಸಭೆಯ ಮಣಿಪಾಲ ವಾರ್ಡ್‌ನ ಸದಸ್ಯೆ ಕಲ್ಪನಾ ಉದ್ಘಾಟಿಸಿದರು.
ಉಡುಪಿ ತಾಲೂಕು ಯೋಜನಾಧಿಕಾರಿ ಅವರು ಮಾತನಾಡಿ ರಾಜ್ಯ ಸರಕಾರದ 700ಕ್ಕೂ ಅಧಿಕ ವಿವಿಧ ರೀತಿಯ ಸೇವೆಗಳು ಮತ್ತು ಸೌಲಭ್ಯಗಳು ಸಾಮಾನ್ಯ ಸೇವಾಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಪ್ರಸ್ತುತ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ’ಇ-ಶ್ರಮ’ ಕಾರ್ಡ್ ನೊಂದಾವಣೆ ಮಾಡಲಾಗುತ್ತದೆ. ಸ್ಥಳೀಯ ಅಸಂಘಟಿತ ಕಾರ್ಮಿಕರೆಲ್ಲರೂ ಈ ಯೋಜನೆಯ ಪ್ರಯೋಜನ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಮಣಿಪಾಲ ವಲಯದ ವಲಯದ್ಯಕ್ಷ ಚಂದ್ರಶೇಖರ, ಮಣಿಪಾಲ ಒಕ್ಕೂಟದ ಅದ್ಯಕ್ಷ ಸುಪ್ರಿತ, ನಿಕಟಪೂರ್ವ ಅಧ್ಯಕ್ಷ ರಮೇಶ ಕಾಮತ್, ವಲಯ ಮೇಲ್ವಿಚಾರಕಿ ಸುಜಾತ ಎಸ್. ಶೆಟ್ಟಿ ಮತ್ತು ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.