ಎಚ್ಐಎಫ್ ಕತರ್ ವಿಭಾಗದ ನೂತನ ಅಧ್ಯಕ್ಷರಾಗಿ ಶಫಕತ್ ಹುಸೈನ್ ಆಯ್ಕೆ
Update: 2022-02-11 17:33 GMT
ದೋಹ : ಎಚ್ಐಎಫ್ ಕತರ್ ವಿಭಾಗದ ನೂತನ ಅಧ್ಯಕ್ಷರಾಗಿ ಶಫಕತ್ ಹುಸೈನ್ ಅವರನ್ನು ಆಯ್ಕೆ ಮಾಡಲಾಗಿದೆ.
ದೋಹದಲ್ಲಿ ಶುಕ್ರವಾರ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಶಫಕತ್ ಹುಸೈನ್ ಅವರನ್ನು ಎಚ್ಐಎಫ್ ಕತರ್ ವಿಭಾಗದ ನೂತನ ಅಧ್ಯಕ್ಷರಾಗಿ, ಶಹೀಮ್ ಮುಹಮ್ಮದ್ ಅವರನ್ನು ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ ಹಾಗು ಶುಹೇಬ್ ಅಹ್ಮದ್ ರನ್ನು ಖಜಾಂಜಿಯಾಗಿ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ.
ಕಳೆದ ಎರಡು ವರ್ಷದ ಕಾರ್ಯಚಟುವಟಿಕೆಗಳನ್ನು ಸಂಸ್ಥೆಯ ಕಾರ್ಯದರ್ಶಿ ಶಹೀಮ್ ಮೊಹಮ್ಮದ್ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ಕತರ್ ಸಂಘ ಸಂಸ್ಥೆಗಳ ನಾಯಕರು, ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಶುಹೇಬ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.