ಸಮಾಜದಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು: ಪೇಜಾವರ ಶ್ರೀ

Update: 2022-02-14 14:18 GMT

ಉಡುಪಿ, ಫೆ.14: ದೊಂಬಿ ಗಾಲಾಟೆ ಹಾನಿಯಾಗಬೇಕೆಂಬ ಅಪೇಕ್ಷೆ ಯಾರಿಗೂ ಇಲ್ಲ. ಎಲ್ಲರೂ ಶಾಂತಿಯನ್ನು ಕಾಪಾಡಬೇಕು ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಕಟ್ಟಿಕೊಳ್ಳುವ ಮಕ್ಕಳ ಬದುಕು ಮುಖ್ಯ. ಮುಂದಿನ ಸಮಾಜ ಸುಶಿಕ್ಷಿತ ಸಮಾಜವಾಗಿ ಇರಬೇಕು. ಸಮಾಜದಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಹಕರಿಸಬೇಕು. ಮಕ್ಕಳ ವಿದ್ಯಾರ್ಜನೆ ಬಹಳ ಮುಖ್ಯ ಎಂದರು.

ಪ್ರಕರಣದ ಕೋರ್ಟ್ ವಿಚಾರಣೆ ನಡೆಯುತ್ತಿದೆ. ಏನು ತೀರ್ಪು ಬರುತ್ತದೆ ಎಂಬುದು ಕಾದು ನೋಡೋಣ, ತೀರ್ಪಿಗೆ ಅನುಗುಣವಾಗಿ ಮುಂದೆ ನಡೆಯೋಣ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News