ದುಬೈ: ಬ್ಯಾರೀಸ್ ವೆಲ್ಫೇರ್ ಫೋರಮ್ ನಿಂದ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ
ದುಬೈ: ಬ್ಯಾರೀಸ್ ವೆಲ್ಫೇರ್ ಫೋರಮ್, ಅಬುಧಾಬಿ ಇದರ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿಲಾಗಿತ್ತು.
ಕೆಸಿಫ್, ಯುಎಇ, ಇಂಡಿಯನ್ ಅಕಾಡೆಮಿಯಲ್ಲಿ ಆಯೋಜಿಸಿದ ಪ್ರತಿಭೋತ್ಸವ -22 ಇದರ ವೇದಿಕೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಬಿಡಬ್ಲ್ಯೂಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ, ಉಪಾಧ್ಯಕ್ಷ ಹಂಝ ಕನ್ನಂಗಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮುಜೀಬ್ ಉಚ್ಚಿಲ್ ಮತ್ತು ರಶೀದ್ ಬಿಜೈ ಹಾಜಬ್ಬರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಮ್ತಾಝ್ ಅಲಿ, ಸಯ್ಯದ್ ತ್ವಾಹ ಭಾಪಕಿ ತಂಘಳ್, ಮೂಸಾ ಹಾಜಿ ಬಸ್ರಾ, ಡಾ.ಯೂಸಫ್, ಅಬು ಸಾಲಿಹ್, ಹಕೀಮ್ ಹಾಜಿ ಮತ್ತು ಕಬೀರ್ ಹಾಜಿ ಇತರರು ವೇದಿಕೆಯಲ್ಲಿ ಉಪಸ್ಥತಿರಿದ್ದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಹಾಜಬ್ಬ, ತಾನು ವಿದ್ಯಾಭ್ಯಾಸ ರಂಗದಲ್ಲಿ ಮಾಡಿದ ಸಾಧನೆಯನ್ನು ವಿವರಿಸಿದರು.
ಈ ವೇಳೆ ಬಿಡಬ್ಲ್ಯೂಫ್ ಸಂಘಟನೆ 7 ವರ್ಷದ ಹಿಂದೆ ಮೊತ್ತ ಮೊದಲು ಅಬುಧಾಬಿಯಲ್ಲಿ ಅವರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ತಮ್ಮನ್ನು ಸನ್ಮಾನಿಸಿದ್ದನ್ನು ನೆನಪು ಮಾಡಿಕೊಂಡರು.