ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ
ದುಬೈ: ಅಕ್ಷರ ಸಂತ ಎಂದೇ ಪ್ರಖ್ಯಾತರಾಗಿರುವ ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ದುಬೈಯ ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ವತಿಯಿಂದ ಸನ್ಮಾನಿಸಲಾಯಿತು.
BCF ಅಧ್ಯಕ್ಷರಾದ ಡಾ ಬಿ.ಕೆ ಯೂಸುಫ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ಬಿಸಿಎಫ್ ನ ನಾಯಕರು, ಪದಾಧಿಕಾರಿಗಳು, ಬಿಸಿಎಫ್ ಮಹಿಳಾ ಮಂಡಳಿಯ ಪದಾಧಿಕಾರಿಗಳು ಇತರ ಸದಸ್ಯರೂ ಉಪಸ್ಥಿತರಿದ್ದರು.
BCF ಗೌರವ ಪೋಷಕ, ಕರ್ನಾಟಕ ಮುಸ್ಲಿಂ ಜಮಾತ್ ಉಪಾಧ್ಯಕ್ಷರೂ ಆದ ಮುಮ್ತಾಜ್ ಅಲಿ, ನಫೀಸ್ ಗ್ರೂಪ್ ದುಬೈ ವ್ಯವಸ್ಥಾಪಕರಾದ ಅಬು ಸಾಲಿಹ್, ಗಡಿಯಾರ್ ಗ್ರೂಪ್ ದುಬೈ ವ್ಯವಸ್ಥಾಪಕರಾದ ಇಬ್ರಾಹಿಂ ಗಡಿಯಾರ, ಉದ್ಯಮಿ ನವೀದ್ ಜಾನ್ ಅಥಿತಿಗಳಾಗಿ ಭಾಗವಹಿಸಿದ್ದರು.
ಖಾದರ್ ಸಾಲೆತ್ತೂರ್, ಝಯಿನುದ್ದೀನ್ ಬೆಳ್ಳಾರೆ, ಮೂಸ ಬಸರ, ಜನಾಬ್ ಅಬ್ದುಲ್ ರಹಿಮಾನ್ ಸಜಿಪ, ಯೂಸುಫ್ ಅರ್ಲಪದವು, ಇಬ್ರಾಹಿಂ ಕಿನ್ಯ ಮೊದಲಾದ ಗಣ್ಯರು ಉಪಸ್ಥಿತಿತರಿದ್ದರು.
ಡಿಕೆಎಸ್ ಸಿ ಪದಾಧಿಕಾರಿ ತಿಂಗಳಾಡಿ ಅಬ್ದುಲ್ ಲತೀಫ್ ರವರ ಕಿರಾಅತ್ ಪಠಿಸಿದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಪ್ರೊಫೆಸರ್ ಕಾಪು ಮುಹಮ್ಮದ್ ಅತಿಥಿಗಳನ್ನು ಆಹ್ವಾನಿಸಿದರು.
ಬಿಸಿಎಫ್ ಉಪಾಧ್ಯಕ್ಷ ಎಂ ಈ ಮೂಳುರ್ ಬಿಸಿಎಫ್ ಸಂಸ್ಥೆಯ ಪರಿಚಯವನ್ನು ನೀಡುವುದರೊಂದಿಗೆ ಸಂಸ್ಥೆಯ ಧ್ಯೇಯೋಧ್ಯೆಶ ಹಾಗೂ ಸಾಧನೆಗಳನ್ನು ವಿವರಿಸಿದರು.
ಅಧ್ಯಕ್ಷ ಡಾ. ಬಿ.ಕೆ. ಯೂಸುಫ್ ಬಿಸಿಎಫ್ ನ ಸಂಕ್ಷಿಪ್ತ ಪರಿಚಯವನ್ನು ನೀಡಿದರು. ಬಿಸಿಎಫ್ ಗೌರವ ಪೋಷಕರಾದ ಮುಮ್ತಾಜ್ ಅಲಿ BCF ಸಂಸ್ಥೆಯ ಸಾಧನೆಗಳನ್ನು ಪ್ರಸ್ತುತ ಪಡಿಸಿದರು. ಪದ್ಮಶ್ರೀ ಹಾಜಬ್ಬ ಅವರು ವಿದ್ಯಾ ಕ್ಷೇತ್ರದಲ್ಲಿ ಮಾಡಿದ ಸೇವೆ, ಅವರ ಸರಳತೆ ಮತ್ತು ಸಮರ್ಪಣಾ ಭಾವದ ಪರಿಚಯ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪದ್ಮಶ್ರೀ ಹರೇಕಳ ಹಾಜಬ್ಬ, ತಾನು ವಿದ್ಯೆಯ ಕೊರತೆಯಿಂದಾಗಿ ಬಳಲುತ್ತಿರುವಂತೆ ತನ್ನ ಹಳ್ಳಿಯ ಮಕ್ಕಳು ಕಷ್ಟಕ್ಕೆ ಸಿಲುಕಬಾರದು ಎಂಬ ಏಕೈಕ ಉದ್ಧೇಶದಿಂದ ದೇವರ ಮೇಲೆ ಭಾರ ಹಾಕಿ ಒಂದು ಶಾಲೆಯನ್ನು ಸ್ಥಾಪಿಸುವಂತಹ ಪ್ರಯತ್ನಕ್ಕೆ ಕೈಹಾಕಿದೆ ಎಂದರು.
ಮುಖ್ಯ ಅತಿಥಿಗಳಾದ ಜನಾಬ್ ಇಬ್ರಾಹಿಂ ಗಡಿಯಾರ್, ಕೆಸಿಎಫ್ ನಾಯಕರಾದ ಕಾದರ್ ಸಾಲೆತ್ತೂರು , ಡಿಕೆಎಸ್ ಸಿ ನಾಯಕರಾದ ಯೂಸುಫ್ ಅರ್ಲಪದವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಪದ್ಮಶ್ರೀ ಹಾಜಬ್ಬ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಮ್ತಾಜ್ ಅಲಿ, ಡಾ ಬಿ ಕೆ ಯೂಸುಫ್ ಮತ್ತು ಡಾ. ಕಾಪು ಮುಹಮ್ಮದ್ ಅವರಿಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
BCF ಉಪಾಧ್ಯಕ್ಷ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ ಧನ್ಯವಾದಗೈದರು.