ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆ: ಶಿವಕುಮಾರ್ ದ್ವಿತೀಯ
Update: 2022-02-24 18:11 GMT
ಉಡುಪಿ, ಫೆ.24: ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ಇದರ ಹನ್ನೆರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾದ ರಾಜ್ಯಮಟ್ಟದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಶಿವಕುಮಾರ ಅಳಗೋಡು ರಚಿಸಿದ ಯವಕ್ರೀತ ವೃತ್ತಾಂತ ಪ್ರಸಂಗಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.
ಬಹುಮಾನವು 5000 ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದ್ದು, ವಾರ್ಷಿಕೋತ್ಸವ ಸಮಾರಂದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಇವರ ದೇವಸೇನಾ ಪರಿಣಯ ಪ್ರಸಂಗಕ್ಕೆ 10ಸಾವಿರ ನಗದಿನೊಂದಿಗೆ ಪ್ರಥಮ ಪ್ರಶಸಿತಿ ಲಭಿಸಿತ್ತು. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪದ ಅಳಗೋಡು ನಿವಾಸಿ.