ಬೆನಗಲ್ ನರಸಿಂಗರಾಯರ 135ನೆ ಜನ್ಮದಿನಾಚರಣೆ

Update: 2022-02-27 14:20 GMT

ಉಡುಪಿ, ಫೆ.27: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನಡೆದ ಅನಧಿಕೃತ ಬಡಾವಣೆ ಮತ್ತು ಏಕನಿವೇಶನ ವಿನ್ಯಾಸ ಹಗರಣದ ಸಂತ್ರಸ್ತರ ಬಳಗದ ಹಲವು ಮಂದಿ ಸಮಾನ ಮನಸ್ಕರೊಂದಿಗೆ ಸೇರಿ ಸಂವಿಧಾನ ತಜ್ಞ, ರಾಜನೀತಿಜ್ಞ, ನ್ಯಾಯಾಧೀಶರಾಗಿದ್ದ ಬೆಣಗಲ್ ನರಸಿಂಗರಾಯರ ಜನ್ಮದಿನಾ ಚರಣೆ ಕಾರ್ಯಕ್ರಮವನ್ನು ಚೇರ್ಕಾಡಿ ದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿತ್ತು.

ಬೆಣಗಲ್ ನರಸಿಂಗರಾಯರ ಭಾವಚಿತ್ರ ಅನಾವರಣ ಮಾಡಿದ ಸಂತ್ರಸ್ತ ಬಳಗದವರು, ಶಾಲೆಯ ಮಕ್ಕಳಿಗೆ ಮತ್ತು ಅಂಗನವಾಡಿ ಕೇಂದ್ರದ ಚಿಣ್ಣರಿಗೆ ಬೆಣಗಲ್ ಸಹೋದರರ ಕೊಡುಗೆಗಳನ್ನು ವಿವರಿಸಿ, ಪುಸ್ತಕ, ಸಿಹಿತಿಂಡಿ ವಿತರಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾದೇವಿ, ಚೇರ್ಕಾಡಿ ಗ್ರಾಪಂ ಅಧ್ಯಕ್ಷೆ ರೇಖಾ ಭಟ್, ಅಂಗನವಾಡಿ ಶಿಕ್ಷಕಿ ಪ್ರಜಾವತಿ, ನಿವೃತ್ತ ಶಿಕ್ಷಕ ಸೂರ್ಯನಾರಾಯಣ ಬಾಯಿರಿ ಮೊದಲಾದವರು ಉಪಸ್ಥಿತರಿದ್ದರು.

ಸಂತ್ರಸ್ತ ಬಳಗದ ಪರವಾಗಿ ಉದ್ಯಮಿ ತಾರಾನಾಥ ಹೆಗ್ಡೆ, ಚಿತ್ರನಟ ರವಿ ಭಟ್, ರಾಬರ್ಟ್ ಡಿಸೋಜ ಕಲ್ಯಾಣಪುರ, ಗೋಪಾಲ ಪಾಲನ್, ಯಶವಂತ, ವಾಸುದೇವ ಗಡಿಯಾರ್, ಡಾ.ಕಮಲೇಶ್ ಮುಂಬ್ರೇಕರ್, ಬಾಲಚಂದ್ರ ಭಟ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News