ದುಬೈ: ಕೆಸಿಎಫ್ ಪ್ರತಿಭೋತ್ಸವ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ

Update: 2022-03-01 13:16 GMT

ದುಬೈ: ಇಲ್ಲಿನ ಇಂಡಿಯನ್ ಅಕಾಡಮಿ ಸ್ಕೂಲ್ ನಲ್ಲಿ ನಡೆದ ನಾಲ್ಕನೆ ಆವೃತಿಯ 'ಪ್ರತಿಭೋತ್ಸವ- 22' ಅದ್ದೂರಿಯಾಗಿ ಸಮಾಪ್ತಿಯಾಯಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರು ಆಗಮಿಸಿದ್ದು, ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಫೈನಾನ್ಸಿಯಲ್ ಕಂಟ್ರೋಲರ್ ಹಮೀದ್ ಸಅದಿ ದುಆದೊಂದಿಗೆ ಆರಂಭಿಸಿದರು.

ಐದು ವಿವಿಧ ವಲಯಗಳಿಂದ ಬಂದ ಸ್ಪರ್ಧಾರ್ಥಿಗಳು ತಮ್ಮ ಗುಂಪಿನ ವಿಜಯಕ್ಕಾಗಿ ಜಿದ್ದಾಜಿದ್ದಿನ ಹೊರಾಟ ನಡೆಸಿದರು. ಶಾರ್ಜಾ ಝೋನ್ ತನ್ನ ಚಾಂಪಿಯನ್ ಪಟ್ಟವನ್ನು ಸತತ ನಾಲ್ಕನೇ ಬಾರಿ ಉಳಿಸಿಕೊಂಡಿತು. ಅತಿಥೆಯ ದುಬೈ ಉತ್ತರ ವಲಯ ಎರಡನೆ ಸ್ಥಾನ, ಅಬುಧಾಬಿ ಮೂರನೇ ಸ್ಥಾನ, ನಾಲ್ಕನೆ ಹಾಗೂ ಐದನೆ ಸ್ಥಾನವನ್ನು ದುಬೈ ದಕ್ಷಿಣ ಹಾಗು ಅಜ್ಮಾನ್ ತಂಡ ಪಡೆದುಕೊಂಡಿತು. ಪ್ರತಿಭೋತ್ಸವದ ಚಾಂಪಿಯನ್ ಟ್ರೋಫಿಯನ್ನು ಶಾರ್ಜಾ ವಲಯಕ್ಕೆ ಹಾಜಬ್ಬ ಅವರು ಹಸ್ತಾಂತರಿಸಿದರು.

ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಗೆ ಕಸದಿಂದ ರಸ, ಸಿಹಿ ಹಾಗು ಖಾರ ಪದಾರ್ಥಗಳ ಪ್ರದರ್ಶನ ಸ್ಪರ್ಧೆ, ಸಾಂಪ್ರದಾಯಿಕ ದಫ್, ಖವಾಲಿ ಹಾಗು ಬುರ್ದಾ ಸ್ಪರ್ಧೆಗಳು ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮೂಸ ಹಾಜಿ ಬಸರ ಸ್ವಾಗತಿಸಿದರು.

ನಮ್ಮ ಕನ್ನಡ ಕಲಿಕೆ ಕಾರ್ಯಕ್ರಮ

ಗಲ್ಫ್ ರಾಷ್ಟ್ರದಲ್ಲಿರುವ ಕನ್ನಡಿಗರಿಗೆ, ಮಕ್ಕಳಿಗೆ ಕೆಸಿಎಫ್ ಹಮ್ಮಿಕೊಂಡ ಕನ್ನಡ ಕಲಿಯುವ ವಿಷೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಅಸಯ್ಯದ್ ತ್ವಾಹ ಬಾಫಕಿ ತಂಙಳ್ ದುಆ ನೆರವೇರಿಸಿದರು. ಶಾರ್ಜಾ ಅಲ್ಖಾಸಿಮಿಯ್ಯ ವಿಶ್ವವಿದ್ಯಾಲಯದಲ್ಲಿ ಅರಬಿಕ್ ಬಾಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ಅಹ್ಮದ್ ಮುಷ್ತಾಕ್ ಅವರನ್ನು ಸನ್ಮಾನಿಸಲಾಯಿತು. ಗಣ್ಯ ಅತಿಥಿಗಳಾಗಿ ಬಂದ ಹಲವಾರು ಅನಿವಾಸಿ ಉದ್ಯಮಿಗಳು, ಶಿಕ್ಷಣ ತಜ್ಞರು ಈ ಸಂದರ್ಭ ಮಾತನಾಡಿದರು.

ಯುಟಿ ಖಾದರ್ ಸಂದೇಶ

ಕಾರ್ಯಕ್ರಮದ ಅತಿಥಿಯಾಗಿ ಬರಬೇಕಿದ್ದ ಶಾಸಕ ಯುಟಿ ಖಾದರ್ ಅವರು ವಿಧಾನ ಸೌಧದಿಂದಲೇ ವೀಡಿಯೊ ಮೂಲಕ ಶುಭ ಹಾರೈಸಿದರು.

ಹಿರಿಯ ಆರ್ಥಿಕ ತಜ್ಞ ಹಾಗೂ ವಿದ್ಯಾಭ್ಯಾಸದ ಬಗ್ಗೆ ವಿಷೇಶ ಕಾಳಜಿ ವಹಿಸುವ ಅಬ್ದುಲ್ಲಾ ಮದುಮೂಲೆ ಅವರಿಗೆ ಅತ್ಯುತ್ತಮ ಶೈಕ್ಷಣಿಕ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಊರಿನ ವಿದ್ಯಾಭ್ಯಾಸ ಸಂಸ್ಥೆಗಳೊಂದಿಗಿರುವ ಸಂಬಂಧ, ಸೇವೆ ಹಾಗು ಕೊಡುಗೆಯನ್ನು ಗುರುತಿಸಿ ಕೆಸಿಎಫ್ ವತಿಯಿಂದ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರತಿನಿಧಿ ಮುಮ್ತಾಝ್ ಅಲಿ ಕೃಷ್ಣಾಪುರ, ಶೈಕ್ ಸಲಾಹ್ ಹಸನ್ ಅಲ್ ಮದನಿ ದುಬೈ, ಡಾ. ಕಾಪು ಮುಹಮ್ಮದ್ ಲಂಡನ್ ಅಮೇರಿಕನ್ ವಿದ್ಯಾಲಯ, ಡಾ. ಯುಸುಫ್ ದುಬೈ ಬ್ಯಾರಿಸ್ ಕಲ್ಚರಲ್ ಫೊರಮ್, ಎಮ್.ಇ ಮೂಲೂರ್ ಶಾರ್ಜ ಕನ್ನಡ ಸಂಘ, ಮುಹಮ್ಮದ್ ಅಲಿ ಉಚ್ಚಿಲ, ಶೇಕ್ ಮಕ್ದೂಮ್, ರೊನಾಲ್ಡ್ ಮಾರ್ಟಿಸ್, ಅಶ್ರಫ್ ಮಾಂತೂರ್, ಅಶ್ರಫ್ ಹಾಜಿ ಅಡ್ಯಾರ್, ಕೆದುಂಬಾಡಿ ಸಖಾಫಿ, ಲತೀಫ್ ತಿಂಗಳಾಡಿ ಅಲ್ ಮದಿನಾ ಗ್ರೂಪ್, ಇಕ್ಬಾಲ್ ಕಾಜೂರ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹಕೀಂ ತುರ್ಕಳಿಕೆ ಹಾಗು ಕಬೀರ್ ಬಾಯಂಬಾಡಿ ನಿರ್ವಹಿಸಿದರು. ಜಡ್ಜ್ ಆಗಿ ಕೆಎಚ್ ಸಖಾಫಿ ಕಾರ್ಯನಿರ್ವಹಿಸಿದರು. ಶಹೀರ್ ಕರಾಯ ಹಾಗು ನವಾಝ್ ಕೋಟೆಕಾರ್ ನೇತೃತ್ವದಲ್ಲಿ ಪ್ರಶಸ್ತಿ ಹಾಗು ಟ್ರೋಫಿ ವಿತರಿಸಲಾಯಿತು. ಡಿಜಿಟಲ್ ವೇದಿಕೆಯನ್ನು ಶಾಹುಲ್ ಹಮೀದ್ ಸಖಾಫಿ ನಿಯಂತ್ರಿಸಿದರು.  ಕಾರ್ಯಕ್ರಮದ ನಿರೂಪಣೆಯನ್ನು ಹಾಫಿಲ್ ಸಯೀದ್ ಹಾಗು ರಿಯಾಝ್ ನಡೆಸಿದರು. ಖಾದರ್ ಸಾಲೆತ್ತೂರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News