ಕುಂದಾಪುರ: ಮಾರ್ಬಲ್ ಬಿದ್ದು ಓರ್ವ ಮೃತ್ಯು, ಇಬ್ಬರಿಗೆ ಗಾಯ

Update: 2022-03-03 16:31 GMT

ಕುಂದಾಪುರ, ಮಾ.3: ತ್ರಾಸಿ ಸಮೀಪದ ಕಂಚುಗೋಡು ಬೀಚ್ ಬಳಿ ಮಾರ್ಬಲ್‌ನ್ನು ಲಾರಿಯಿಂದ ಇಳಿಸುವ ವೇಳೆ ನಡೆದ ಅವಘಢದಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡ ಘಟನೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ.

ಪಶ್ಚಿಮ ಬಂಗಾಲ ಮೂಲದ ಗಣಪತಿ ಮೃತ ವ್ಯಕ್ತಿ ಎನ್ನಲಾಗಿದೆ. ಇನ್ನಿಬ್ಬರು ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಿದ್ದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಚುಗೋಡು ಬೀಚ್ ಸಮೀಪ ನಿರ್ಮಾಣವಾಗುತ್ತಿದ್ದ ಖಾಸಗಿ ರೆಸಾಟ್ ಒಂದರ ಕಾಮಗಾರಿ ಸಲುವಾಗಿ ಪಶ್ಚಿಮ ಬಂಗಾಲದಿಂದ ಲಾರಿಯಲ್ಲಿ ಮಾರ್ಬಸ್‌ಗಳನ್ನು ಬುಧವಾರ ತರಿಸಲಾಗಿತ್ತು. ಬೃಹತ್ ಸರಕು ಆಗಿರುವು ದರಿಂದ ಬುಧವಾರದಿಂದಲೇ 5-6 ಮಂದಿಯ ತಂಡವು ಲಾರಿಯಿಂದ ಮಾರ್ಬಲ್‌ಗಳನ್ನು ಇಳಿಸುತ್ತಿದ್ದರು.

ಗುರುವಾರ ಸಂಜೆ ವೇಳೆಗೆ ಅರ್ಧದಷ್ಟು ಇಳಿಸಿ ಆಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಇಳಿಸುತ್ತಿರುವ ವೇಳೆ ಮೂವರ ಮೇಲೆ ಬೃಹತ್ ಮಾರ್ಬಲ್ ಬಿದ್ದಿತ್ತು ಎನ್ನಲಾಗಿದ್ದು, ಇದರಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉೞಳಿದಿಬ್ಬರು ಗಾಯಗೊಂಡರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News