ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮನೋಹರ ಕಲ್ಮಾಡಿ ನೇಮಕ

Update: 2022-03-10 15:19 GMT

ಉಡುಪಿ, ಮಾ.10: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಜಿಲ್ಲೆಯ ಬಿಜೆಪಿ ನಾಯಕ ಮನೋಹರ ಕಲ್ಮಾಡಿ ಅವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಪ್ರಾಧಿಕಾರದ ಸದಸ್ಯರಾಗಿ ಅಂಬಲಪಾಡಿಯ ಪ್ರವೀಣ್‌ಕುಮಾರ್ ಶೆಟ್ಟಿ, ಮಣ್ಣೋಳಿಗುಜ್ಜೆ ನೇಕಾರ ಕಾಲೋನಿಯ ಕಿಶೋರ್‌ಕುಮಾರ್, ಶಿವಳ್ಳಿ ಗ್ರಾಮ ಸಗ್ರಿಯ ಸುಮಾ ನಾಯ್ಕಿ, ಪಡುತೋನ್ಸೆಯ ಮಾಲತಿ ಸುಧಾಕರ್ ಹಾಗೂ ಅಂಬಲಪಾಡಿಯ ಯೋಗೀಶ್‌ಚಂದ್ರ ಇವರನ್ನು ನೇಮಕ ಮಾಡಲಾಗಿದೆ. ಇವರ ಕಾರ್ಯಾವಧಿಯೂ ಮೂರು ವರ್ಷಗಳು ಅಥವಾ ಸರಕಾರದ ಮುಂದಿನ ಆದೇಶದವರೆಗೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News