ಮಾ.12ರಂದು ಫಲಾನುಭವಿಗೆ ಪೆರ್ಡೂರಿನ ಮನೆ ಹಸ್ತಾಂತರ

Update: 2022-03-10 16:04 GMT

ಉಡುಪಿ, ಮಾ.10: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿ ಗಳಾದ ಪ್ರಶಾಂತ್‌ ಕುಮಾರ್ (ಅಂತಿಮ ಬಿ.ಇ) ಮತ್ತು ಪವಿತ್ರಾ (ತೃತೀಯ ಬಿ.ಎಸ್ಸಿ) ಇವರಿಗೆ ಪೆರ್ಡೂರಿನಲ್ಲಿ ನಿರ್ಮಿಸಿ ಕೊಟ್ಟ ಮನೆಯ ಉದ್ಘಾಟನೆ ಮಾ.12ರ ಸಂಜೆ 5 ಗಂಟೆಗೆ ನೆರವೇರಲಿದೆ.

ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಮತ್ತು ವಿಷ್ಣುಮೂರ್ತಿ ಭಟ್ ಸಹೋದರರು ತಮ್ಮ ತೀರ್ಥರೂಪರಾದ ಗುಂಡಿಬೈಲು ಅಚ್ಯುತ ಭಟ್ ಸಪ್ತತಿ ಆಚರಣೆಯ ಸಂದರ್ಭದಲ್ಲಿ ಈ ಮನೆಯ ಪ್ರಾಯೋಜಕತ್ವವನ್ನು ವಹಿಸಿ ಕೊಂಡಿದ್ದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ಬಡ ವಿದ್ಯಾರ್ಥಿಗಳಿಗೆ ನಿರ್ಮಿಸಿ ಕೊಡುತ್ತಿರುವ 23ನೇ ಮನೆಯಾಗಿದೆ ಎಂದು ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾಯದರ್ರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News