ಮಣಿಪಾಲ ಆಂಬ್ಯುಲೆನ್ಸ್ ಮಾಹಿತಿ ಕೇಂದ್ರ ಉದ್ಘಾಟನೆ
Update: 2022-03-13 13:32 GMT
ಮಣಿಪಾಲ : ಮಣಿಪಾಲ ಬಬ್ಬು ಸ್ವಾಮಿ ಆಂಬ್ಯುಲೆನ್ಸ್ ಮತ್ತು ಟ್ಯಾಕ್ಸಿ ಚಾಲಕರ ಹಾಗೂ ಮಾಲಕರ ಸಂಘ ವತಿಯಿಂದ ಮಣಿಪಾಲದಲ್ಲಿ ಆರಂಭಿಸಲಾದ ಶ್ರೀಬಬ್ಬುಸ್ವಾಮಿ ಆಂಬುಲೆನ್ಸ್ ಮಾಹಿತಿ ಕೇಂದ್ರ ರವಿವಾರ ಉದ್ಘಾಟನೆಗೊಂಡಿತು.
ಈ ಸಂಘದಿಂದ ಕಳೆದ ೧೩ ವರ್ಷಗಳಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಎದುರು ರಸ್ತೆ ಬದಿಯಲ್ಲಿ ಆಂಬ್ಯುಲೆನ್ಸ್ ಮತ್ತು ಟ್ಯಾಕ್ಸಿ ಸೇವೆಯನ್ನು ನೀಡುತ್ತಿ ದ್ದಾರೆ. ಅಂಬ್ಯುಲೆನ್ಸ್‌ಗಳಿಗೆ ಸರಿಯಾದ ವಾಹನ ನಿಲ್ದಾಣ ಇಲ್ಲದಿರುವುದನ್ನು ಮನಗಂಡ ಸದಸ್ಯರು ಮಣಿಪಾಲದಲ್ಲಿ ಆಂಬುಲೆನ್ಸ್ ಮಾಹಿತಿ ಕೇಂದ್ರವನ್ನು ಆರಂಭಿಸಿದ್ದು, ಇದನ್ನು ಮಣಿಪಾಲ ಬಬ್ಬು ಸ್ವಾಮಿ ದೈವವು ಉದ್ಘಾಟಿಸಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯಶವಂತ್, ಪ್ರಧಾನ ಕಾರ್ಯದರ್ಶಿ ಶರತ್ ಕೆ., ಖಜಾಂಚಿ ಮೌರಿಸ್ ಡಿಸೋಜ, ಉಪಾಧ್ಯಕ್ಷ ಫ್ರಾನ್ಸಿಸ್ ಮಸ್ಕರೇನಸ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.