ಮುಂಬೈ-ತೋಕೂರು ಮಧ್ಯೆ ಹೋಳಿ ವಿಶೇಷ ಸಾಪ್ತಾಹಿಕ ರೈಲು

Update: 2022-03-16 14:33 GMT
ಸಾಂದರ್ಭಿಕ ಚಿತ್ರ

ಉಡುಪಿ : ಹೋಳಿ ಹಬ್ಬದ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರ  ವಿಶೇಷ ನೂಕುನುಗ್ಗಲನ್ನು ನಿಭಾಯಿಸಲು ಕೊಂಕಣ ರೈಲ್ವೆಯು ಕೇಂದ್ರ ರೈಲ್ವೆಯ ಸಹಯೋಗದೊಂದಿಗೆ ಮುಂಬೈ ಹಾಗೂ ತೋಕೂರು ಮಧ್ಯೆ ವಿಶೇಷ ಹೋಳಿ ಸಾಪ್ತಾಹಿಕ ರೈಲನ್ನು ಓಡಿಸಲಿದೆ.

ರೈಲು ನಂ.೦೧೦೧೭ ಲೋಕಮಾನ್ಯ ತಿಲಕ್-ತೋಕೂರು ಸಾಪ್ತಾಹಿಕ ವಿಶೇಷ ರೈಲು ಮಾ.17ರ ಗುರುವಾರ ಅಪರಾಹ್ನ 1.30ಕ್ಕೆ ಮುಂಬೈಯಿಂದ ಹೊರಡಲಿದ್ದು, ಮರುದಿನ ಶುಕ್ರವಾರ ಮುಂಜಾನೆ 7.10ಕ್ಕೆ ತೋಕೂರು ತಲುಪಲಿದೆ.

ರೈಲು ನಂ.೦೧೦೧೮ ತೋಕೂರು- ಲೋಕಮಾನ್ಯ ತಿಲಕ್ ಸಾಪ್ತಾಹಿಕ ವಿಶೇಷ ರೈಲು ಮಾ.18ರ ಶುಕ್ರವಾರ ಅಪರಾಹ್ನ 12ಕ್ಕೆ ತೋಕೂರಿನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಮುಂಜಾನೆ 5ಗಂಟೆಗೆ ಲೋಕಮಾನ್ಯ ತಿಲಕ್ ತಲುಪಲಿದೆ.

ಈ ರೈಲಿಗೆ ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕಾವಳಿ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು 21ಬೋಗಿಗಳನ್ನು ಹೊಂದಿರುತ್ತದೆ. ಫಸ್ಟ್‌ಕಾಸ್ ಎಸಿ-೧ಕೋಚ್, ೨ಟಯರ್ ಎಸಿ-೩ಕೋಚ್, ೩ಟಯರ್ ಎಸಿ-೧೫ ಕೋಚ್, ಜನರಲ್ ಕಾರ್-೨ನ್ನು ಒಳಗೊಂಡಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News