ಮಾ. 20: ತುಂಬೆ ಹಾಸ್ಪಿಟಲ್ ಅಜ್ಮಾನ್ ನಿಂದ ಉಚಿತ ಮೆಗಾ ವೈದ್ಯಕೀಯ ಶಿಬಿರ
ಅಜ್ಮಾನ್, ಮಾ. 17: ಅಲ್ ನುಯೈಮಿಯಾದ ಇತ್ತಿಹಾದ್ ರಸ್ತೆಯಲ್ಲಿರುವ ತುಂಬೆ ಹಾಸ್ಪಿಟಲ್ ಅಜ್ಮಾನ್ (ಟಿಎಚ್ಎ) ಮಾರ್ಚ್ 20ರಂದು ಉಚಿತ ಮೆಗಾ ವೈದ್ಯಕೀಯ ಶಿಬಿರ ಏರ್ಪಡಿಸಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿರುವ ವೈದ್ಯಕೀಯ ಶಿಬಿರದಲ್ಲಿ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ, ತಪಾಸಣೆ ಲಭ್ಯವಿರಲಿದೆ.
ಔಷಧ, ಇಸಿಜಿ, ಅಲ್ಟ್ರಾಸೌಂಡ್, ಫಿಸಿಯೋಥೆರಪಿ, ನೇತ್ರ ತಪಾಸಣೆ, ರಕ್ತದೊತ್ತಡ, ರಕ್ತದ ಸಕ್ಕರೆ ಪರೀಕ್ಷೆ, ಬಿಎಂಐ ಸ್ಕ್ರೀನಿಂಗ್ ಅನ್ನು ಉಚಿತವಾಗಿ ನೀಡಲಾಗುವುದು.
ದಂತ ಚಿಕಿತ್ಸೆಯಲ್ಲಿ ರಿಯಾಯಿತಿ ಒದಗಿಸಲಾಗುವುದು. ಅಸ್ತವ್ಯಸ್ತ ಜೀವನ ಶೈಲಿಯು ಒಬ್ಬರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಸಮಾಜದ ವಿವಿಧ ಶ್ರಮಿಕ ವಲಯಗಳಲ್ಲಿ ಜಾಗೃತಿ ಮೂಡಿಸುವ ಪವಿತ್ರ ಉದ್ದೇಶದಿಂದ ಈ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗುತ್ತಿದೆ ಎಂದು ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಅವರು ತಿಳಿಸಿದ್ದಾರೆ.
ಅಸ್ತವ್ಯಸ್ಥ ಜೀವನ ಶೈಲಿಯಿಂದ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಆರಂಭಿಕ ರೋಗ ನಿರ್ಣಯ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಶಿಬಿರದಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ವೈದ್ಯರು ಮುನ್ನೆಚ್ಚರಿಕೆ ಹಾಗೂ ಚಿಕಿತ್ಸೆಗಳ ಸಲಹೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ತುಂಬೆ ಆಸ್ಪತ್ರೆ ರಮಝಾನ್ ಪ್ಯಾಕೇಜ್ ಅನ್ನು ಕೂಡ ಆರಂಭಿಸಿದೆ. ಇದರಲ್ಲಿ ವೈದ್ಯರಿಂದ ಉಚಿತ ಸಮಾಲೋಚನೆಯೊಂದಿಗೆ ಆರೋಗ್ಯದ 83 ಮಾನದಂಡಗಳ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.