ತೆಂಗಿನ ಮರದಿಂದ ಬಿದ್ದು ಮೃತ್ಯು
Update: 2022-03-18 16:28 GMT
ಮಲ್ಪೆ: ತೆಂಗಿನ ಮರದಿಂದ ಕಾಯಿಗಳನ್ನು ಕೊಯ್ದು ಇಳಿಯುವಾಗ ಅಕಸ್ಮಿಕವಾಗಿ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಈಶ್ವರನಗರದಲ್ಲಿ ನಡೆದಿದೆ.
ತೆಂಗಿನಕಾಯಿ ಕೊಯ್ಯುವ ಕೆಲಸ ಮಾಡಿಕೊಂಡಿದ್ದ ರವಿ (46) ಎಂಬವರು ಇಂದು ಬೆಳಗ್ಗೆ ಈಶ್ವರನಗರದ ನಿವಾಸಿ ಜೈಕರ್ ಎಂಬವರ ಮನೆಯ ತೆಂಗಿನ ಮರದಿಂದ ತೆಂಗಿನಕಾಯಿ ಕೊಯ್ದು ಇಳಿಯುತ್ತಿರುವಾಗ ಅಕಸ್ಮಿಕವಾಗಿ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗಾದ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮೃತ ಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.