ಕಾರ್ಕಳ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಶೀಘ್ರವೇ ಮೇಲ್ದರ್ಜೆಗೆ : ಮಾಹೆ ಕುಲಪತಿ ಲೆ.ಜ.ಡಾ.ವೆಂಕಟೇಶ್

Update: 2022-03-23 14:27 GMT

ಮಣಿಪಾಲ : ಮಾಹೆ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕಾರ್ಕಳದಲ್ಲಿರುವ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯನ್ನು ಶೀಘ್ರವೇ ಮೇಲ್ದರ್ಜೆಗೇರಿಸಲಾಗುವುದು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ಸಂಕೀರ್ಣ ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ತಿಳಿಸಿದ್ದಾರೆ.

ದಾನಿಗಳಾದ ರೊಟೇರಿಯನ್ ಮೋಹನ್ ಶೆಣೈ ಹಾಗೂ ಅರುಣಾ ಎಂ.ಶೆಣೈ ದಂಪತಿ ಕಾರ್ಕಳ ರೋಟರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮಣಿಪಾಲದ ಮಾಹೆ ಟ್ರಸ್ಟ್‌ಗೆ ನೀಡಿದ ಹತ್ತು ಲಕ್ಷ ರೂ.ದೇಣಿಗೆಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಮೋಹನ್ ಶೆಣೈ ದಂಪತಿ ನೀಡಿದ ದೇಣಿಗೆ ಮೊತ್ತಕ್ಕೆ ಸಮಾನ ಮೊತ್ತವನ್ನು  ಮಾಹೆ ಟ್ರಸ್ಟ್‌ನಿಂದ ಸೇರಿಸಿ ಅದನ್ನು ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯ ಸೇವೆಗಳನ್ನು ಸುಧಾರಿಸಲು ಬಳಸಲಾಗುವುದು ಎಂದು ಘೋಷಿಸಿದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಜನರು ಇನ್ನಷ್ಟು ಉದಾರ ದೇಣಿಗೆಯೊಂದಿಗೆ ಮುಂದೆ ಬಂದರೆ ಮಾಹೆ ತನ್ನ ಸಮಾಜ ಮುಖಿ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗಲಿದೆ ಎಂದರು.

ಮಾಹೆ ಮಣಿಪಾಲದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್ ವಿನೋದ್ ಭಟ್, ಕುಲಸಚಿವ ಡಾ. ನಾರಾಯಣ್ ಸಭಾಹಿತ್, ರೊಟೇರಿ ಕ್ಲಬ್‌ನ ತುಕಾರಾಮ ನಾಯಕ್, ಸುವರ್ಣ ನಾಯಕ್ ಮತ್ತು ಕಾರ್ಕಳ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯ  ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News