12ರಿಂದ14 ವರ್ಷದ 946 ಮಕ್ಕಳಿಗೆ ಕೋವಿಡ್ ಲಸಿಕೆ

Update: 2022-03-23 16:23 GMT

ಉಡುಪಿ : ಜಿಲ್ಲೆಯಲ್ಲಿ ಇಂದು 12ರಿಂದ 14 ವರ್ಷದೊಳಗಿನ ಒಟ್ಟು 946 ಮಕ್ಕಳಿಗೆ ಕೋವಿಡ್‌ನ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೪,೩೫೭ ಮಕ್ಕಳು ಈ ಲಸಿಕೆಯನ್ನು ಪಡೆದಂತಾಗಿದೆ.

ಅಲ್ಲದೇ ದಿನದಲ್ಲಿ ಒಟ್ಟು ೫೦೧೪ ಮಂದಿ ಇಂದು ಲಸಿಕೆಯನ್ನು ಪಡೆದು ಕೊಂಡಿದ್ದಾರೆ. ೬೦ ವರ್ಷ ಮೇಲಿನ ೭೭೦ ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು ೭೯೮ ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ಒಟ್ಟು ೯೯೭ ಮಂದಿ ಮೊದಲ ಡೋಸ್ ಹಾಗೂ ೩೨೧೯ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಒಬ್ಬರು ಪಾಸಿಟಿವ್: ಉಡುಪಿಯ ಒಬ್ಬ ಮಹಿಳೆಯಲ್ಲಿ ಇಂದು ಕೋವಿಡ್- ೧೯  ಸೋಂಕು ಪತ್ತೆಯಾಗಿದೆ. ದಿನದಲ್ಲಿ ಒಟ್ಟು ೪೧೫ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಉಡುಪಿ ತಾಲೂಕಿನಲ್ಲಿ ೩೨೨, ಕುಂದಾಪುರ ೫೧ ಹಾಗೂ ಕಾರ್ಕಳ ತಾಲೂಕಿನಲ್ಲಿ ೪೨ ಮಂದಿ ಪರೀಕ್ಷೆಗೊಳಗಾಗಿದ್ದರು. 

ದಿನದಲ್ಲಿ ಯಾರೂ ಸೋಂಕಿನಿಂದ ಚೇತರಿಸಿಕೊಂಡಿಲ್ಲ. ಸದ್ಯ ಚಿಕಿತ್ಸೆಯಲ್ಲಿರು ವವರ ಸಂಖ್ಯೆ ೭ ಆಗಿದೆ. ಜ.೧ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ೧೮,೪೨೯ ಆದರೆ, ಚೇತರಿಸಿಕೊಂಡವರ ಸಂಖ್ಯೆ ೧೮೪೮೯ ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News