ರೆಡ್‌ಕ್ರಾಸ್‌ನಿಂದ ದಿನಸಿ ಕಿಟ್ ವಿತರಣೆ

Update: 2022-03-23 16:25 GMT

ಉಡುಪಿ : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದೊಂದಿಗೆ, ನಗರದ ರೆಡ್‌ಕ್ರಾಸ್ ಭವನದಲ್ಲಿ ಕರ್ನಾಟಕ ರಾಜ್ಯ ಶಾಖೆಯಿಂದ ನೀಡಲ್ಪಟ್ಟ ದಿನಸಿ ಕಿಟ್‌ಗಳನ್ನು ಅರ್ಹ ಬಡ ಫಲಾನುಭವಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ವಹಿಸಿದ್ದರು. ಒಟ್ಟು ೧೨ ಫಲಾನುಭವಿ ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ. ರತ್ನಾ ಕರ ಶೆಟ್ಟಿ, ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮಧುಸೂದನ್ ಹೆಗ್ಡೆ, ಶೋಭಾ ಎಂ. ಹೆಗ್ಡೆ, ಪಾಂಡುರಂಗ ಆಚಾರ್ಯ, ಅಧ್ಯಕ್ಷ ಆನಂದ ಗಾಣಿಗ, ಕಾರ್ಯದರ್ಶಿ ವೀಣಾ, ಖಜಾಂಚಿ ಜಯಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News