ಮಾ.26 ರಿಂದ ‘ಪರಿಕ್ರಮ-2022’ ಅಂತಾರಾಷ್ಟ್ರೀಯ ಸಮ್ಮೇಳನ
ಉಡುಪಿ, ಮಾ.24: ಸೀನಿಯರ್ ಛೇಂಬರ್ ಇಂಟರ್‌ನ್ಯಾಶನಲ್ ವತಿ ಯಿಂದ ಪರಿಕ್ರಮ-2022 ಅಂತಾರಾಷ್ಟ್ರೀಯ ಸಮ್ಮೇಳನವನ್ನು ಮಾ.26 ಮತ್ತು 27ರಂದು ಬ್ರಹ್ಮಾವರದ ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ನಡೆಯ ಲಿದೆ ಎಂದು ಛೇಂಬರ್ಸ್ ಇಂಟರ್‌ನ್ಯಾಶನಲ್ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ವನ್ನು ಜೆಸಿಐ ಇಂಡಿಯಾ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಕೆ. ವಲ್ಲಭದಾಸ್ ಉದ್ಘಾಟಿಸಲಿರುವರು. ವಿನೋದಾವಳಿ ಸ್ಪರ್ಧೆ, ವಿವಿಧ ಘಟಕಗಳಿಗೆ ಪ್ರಶಸ್ತಿ ಪ್ರದಾನ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದವರಿಗೆ ಸಮ್ಮಾನ, ಭಾರತೀಯ ಸೇನಾಧಿಕಾರಿ ಲೆ.ಕರ್ನಲ್ ಜಗದೀಶ್ ಹೆಬ್ರಿ ಅವರಿಗೆ ರಾಷ್ಟ್ರ ಸೇವಾನಿಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2022-23ನೇ ಸಾಲಿಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಕಾರಿಣಿ ಮಂಡಳಿ ಚುನಾವಣೆ ಪ್ರಕ್ರಿಯೆ, ಅಧಿವೇಶನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ನಿರ್ದೇಶಕ ಜಗದೀಶ್ ಕೆಮ್ಮಣ್ಣು ಎನ್., ಪ್ರಮುಖರಾದ ಜಿ.ಸುಕುಮಾರ್, ಚಿತ್ರಕುಮಾರ್, ಸಂಪತ್ ಕುಮಾರ್, ವಿಜಯಕುಮಾರ್ ಉಪಸ್ಥಿತರಿದ್ದರು.