ದುಬೈ: ಮಾರ್ಚ್ 26ರಿಂದ 29ರವರೆಗೆ ಬೃಹತ್ ಬಿಳಿ ವಜ್ರದ ಪ್ರದರ್ಶನ

Update: 2022-03-25 18:21 GMT

ಮಾ.25: ದಿ ರಾಕ್ ಎಂದೇ ಪ್ರಸಿದ್ಧವಾಗಿರುವ ದೈತ್ಯ ಬಿಳಿವಜ್ರವನ್ನು ಇದೇ ಪ್ರಥಮ ಬಾರಿಗೆ ದುಬೈಯಲ್ಲಿ ಮಾರ್ಚ್ 26ರಿಂದ 29ರವರೆಗೆ ಪ್ರದರ್ಶನಕ್ಕಿಡಲಾಗಿದೆ. ಆ ಬಳಿಕ ಅದನ್ನು ಹರಾಜು ಹಾಕುವ ಉದ್ದೇಶವಿದ್ದು ಸುಮಾರು 30 ಮಿಲಿಯನ್ ಡಾಲರ್ ಮೌಲ್ಯಕ್ಕೆ ಹರಾಜಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

228.31 ಕ್ಯಾರಟ್ ನ ಪೇರಳೆ ಹಣ್ಣಿನಾಕೃತಿಯ ಈ ಬೃಹತ್ ವಜ್ರ 20 ವರ್ಷದ ಹಿಂದೆ ದಕ್ಷಿಣ ಆಫ್ರಿಕಾದ ಗಣಿಯಲ್ಲಿ ಪತ್ತೆಯಾಗಿದ್ದು ಇದುವರೆಗೆ ಲಭಿಸಿರುವ ಅತೀ ದೊಡ್ಡ ಬಿಳಿ ವಜ್ರ ಇದಾಗಿದೆ. ಮಾರ್ಚ್ 29ರವರೆಗೆ ದುಬೈಯಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಬಳಿಕ ತೈಪೆ, ನ್ಯೂಯಾರ್ಕ್ ಮೂಲಕ ಜಿನೆವಾ ತಲುಪಲಿದ್ದು ಅಲ್ಲಿ ಮೇ 11ರಂದು ಹರಾಜಿಗೆ ಇಡಲಾಗುವುದು.

 ಬೃಹತ್ ವಜ್ರದ ಏಲಂಗೆ ಸಂಬಂಧಿಸಿ ಈ ಹಿಂದಿನ ದಾಖಲೆ 2017ರ ನವೆಂಬರ್ ನಲ್ಲಿ 33.7 ಮಿಲಿಯನ್ ಡಾಲರ್ ಮೌಲ್ಯಕ್ಕೆ ಹರಾಜಾದ 163.41 ಕ್ಯಾರಟ್ ವಜ್ರದ ಹೆಸರಲ್ಲಿತ್ತು. ಮಧ್ಯಪ್ರಾಚ್ಯ ದೇಶಗಳು ಯಾವತ್ತೂ ಪ್ರಮುಖ ವಜ್ರಗಳು ಹಾಗೂ ರತ್ನದ ಆಭರಣಗಳ ಬಗ್ಗೆ ಮೆಚ್ಚುಗೆ ಬೆಳೆಸಿಕೊಂಡಿರುತ್ತವೆ. ಆದ್ದರಿಂದಲೇ ಈ ಬೃಹತ್ ವಜ್ರದ ಪ್ರದರ್ಶನವನ್ನು ಆರಂಭಿಸಲು ದುಬೈ ಅತೀ ಸೂಕ್ತ ಪ್ರದೇಶ ಎಂದು ನಾವು ನಿರ್ಧರಿಸಿದ್ದೇವೆ ಎಂದು ವಜ್ರದ ಹರಾಜು ಪ್ರಕ್ರಿಯೆಯ ಉಸ್ತುವಾರಿ ವಹಿಸಿರುವ ಕ್ರಿಸ್ತೀಸ್ ಹರಾಜು ಕೇಂದ್ರದ ಅಂತರಾಷ್ಟ್ರೀಯ ಆಭರಣ ಕೇಂದ್ರದ ಮುಖ್ಯಸ್ಥ ರಾಹುಲ್ ಕದಾಕಿಯಾ ಹೇಳಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News