ಎಸ್ಸಿಎಸ್ಟಿ ಗುತ್ತಿಗೆದಾರರ ಅಧ್ಯಕ್ಷರಿಗೆ ದೌರ್ಜನ್ಯ: ಆರೋಪಿ ಬಂಧನಕ್ಕೆ ಆಗ್ರಹ

Update: 2022-04-01 13:42 GMT

ಉಡುಪಿ : ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪರಮೇಶ್ವರ ಉಪ್ಪೂರು ಅವರ ವಿರುದ್ಧ ದೌರ್ಜನ್ಯ ಎಸಗಿರುವ ಆರೋಪಿ ಮುದರಂಗಡಿ ಗ್ರಾಪಂ ಉಪಾಧ್ಯಕ್ಷ ಶರತ್ ಶೆಟ್ಟಿಯನ್ನು ಕೂಡಲೇ ಬಂಧಿಸುವಂತೆ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಒತ್ತಾಯಿಸಿದ್ದಾರೆ.

ಫೇಸ್‌ಬುಕ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಳಪೆ ಕಾಮಗಾರಿ ಕುರಿತು ಆರೋಪ ಹೊರಿಸಿ ಪರಮೇಶ್ವರ್ ಉಪ್ಪೂರು ಅವರಿಗೆ ಗುತ್ತಿಗೆ ಸಿಗದಂತೆ ಅಪ್ರಚಾರ ನಡೆಸಿದ ಆರೋಪದಡಿ ಶರತ್ ಶೆಟ್ಟಿ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಯನ್ನು ಇನ್ನು ಕೂಡ ಬಂಧಿಸದೆ, ಪಂಚಾಯತ್ ಕಚೇರಿಗೆ ಬಂದು ಕಾರ್ಯ ಭಾರ ಮಾಡಲು ಅವಕಾಶ ಮಾಡಿಕೊಡ ಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತಕ್ಷಣ ಆರೋಪಿ ಶರತ್ ಶೆಟ್ಟಿಯನ್ನು ಬಂಧಿಸಿ ಕಾನೂನು ಕ್ರಮಕೊಳ್ಳದೇ ಇದ್ದಲ್ಲಿ ಪಡುಬಿದ್ರೆ ಪೋಲಿಸ್ ಠಾಣೆಯೆದುರು ಪ್ರತಿಭಟನೆ ನಡೆಸಲಾಗುವುದ. ಆರೋಪಿಯನ್ನು ಬಂಧಿಸಲು ಮೀನ ಮೇಷ ಎಣಿಸಿ ಆರೋಪಿ ಪರವಾಗಿ ವರ್ತಿಸಿದರೆ ಪಡುಬಿದ್ರಿ ಠಾಣಾಧಿಕಾರಿ ಯವರನ್ನು ಅಮಾನತಿಗೆ ಆಗ್ರಹಿಸಿ ಎಸ್ಪಿ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಣೆ ಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News