ಎಪ್ರಿಲ್ 2 ರಮದಾನ್ ಪ್ರಥಮ ದಿನ: ಯುಎಇ ಚಂದ್ರದರ್ಶನ ಸಮಿತಿ ಘೋಷಣೆ
Update: 2022-04-01 18:06 GMT
ದುಬೈ: 2022ರ ರಮದಾನ್ ನ ಪ್ರಥಮ ದಿನವನ್ನು ಎಪ್ರಿಲ್ 2ರ ಶನಿವಾರ ಆಚರಿಸಲಾಗುವುದು ಎಂದು ಯುಎಇಯ ಚಂದ್ರದರ್ಶನ ಸಮಿತಿ ಶುಕ್ರವಾರ ಘೋಷಿಸಿದೆ.ಎಪ್ರಿಲ್ 1ರ ಶುಕ್ರವಾರ ಶಬಾನ್ 1443 ಹಿಜ್ರಿಯ ಕೊನೆಯ ದಿನವಾಗಿರುತ್ತದೆ ಎಂದು ಸಮಿತಿ ಹೇಳಿದೆ. ಇಸ್ಲಾಮಿಕ್ ಕ್ಯಾಲೆಂಡರ್ ನಲ್ಲಿ 9ನೇ ತಿಂಗಳಾಗಿರುವ ರಮದಾನ್ ಸಂದರ್ಭ ವಿಶ್ವದೆಲ್ಲೆಡೆಯ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸುತ್ತಾರೆ. ಪವಿತ್ರ ತಿಂಗಳಿನಲ್ಲಿ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಕಡಿಮೆ ಕೆಲಸದ ಸಮಯವನ್ನು ಯುಎಇ ಈಗಾಗಲೇ ಘೋಷಿಸಿದೆ.