ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಟ್ವಿಟರ್ ಖಾತೆ ಹ್ಯಾಕ್ !

Update: 2022-04-09 02:31 GMT
ಸಿಎಂ ಆದಿತ್ಯನಾಥ್

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಅಧಿಕೃತ ಟ್ವಿಟರ್ ಖಾತೆ ಉತ್ತರ ಪ್ರದೇಶ ಚೀಫ್ ಮಿನಿಸ್ಟರ್ಸ್ ಆಫೀಸ್ (ಯುಪಿ ಸಿಎಂಒ) ಶನಿವಾರ ಅಲ್ಪ ಅವಧಿಗೆ ಹ್ಯಾಕ್ ಅಗಿದೆ. ಯುಪಿ ಸಿಎಂಒ ಖಾತೆ 40 ಲಕ್ಷ ಅನುಯಾಯಿಗಳನ್ನು ಹೊಂದಿದೆ.

'ಹೌ ಟೂ ಟರ್ನ್ ಯುವರ್ ಬಿಎವೈಸಿ/ಎಂಎವೈಸಿ ಆನಿಮೇಟೆಡ್ ಆನ್ ಟ್ವಿಟರ್' ಎಂಬ ಟ್ಯುಟೋರಿಯಲ್‍ನ ಪೋಸ್ಟ್ ಯುಪಿ ಸಿಎಂಒ ಟ್ವಿಟರ್ ಹ್ಯಾಂಡಲ್‍ ನಿಂದ ಪೋಸ್ಟ್ ಆದ ಹಿನ್ನೆಲೆಯಲ್ಲಿ ಖಾತೆ ಹ್ಯಾಕ್ ಆಗಿರುವುದು ಬೆಳಕಿಗೆ ಬಂತು. ಜತೆಗೆ ಯುಪಿ ಸಿಎಂಒ ಖಾತೆಯ ಪ್ರೊಫೈಲ್ ಫೋಟೊದಲ್ಲಿ ಕಾರ್ಟೂನಿಸ್ಟ್ ಫೋಟೊ ಹಾಕಲಾಗಿತ್ತು.

ಅಪರಿಚಿತ ಹ್ಯಾಕರ್ ಗಳು ಕೆಲ ರ್ಯಾಂಡಮ್ ಟ್ವೀಟ್‍ಗಳ ಥ್ರೆಡ್‍ಗಳನ್ನು ಯುಪಿ ಸಿಎಂಒ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಇದೀಗ ಟ್ವಿಟರ್ ಖಾತೆ ಸುಸ್ಥಿತಿಗೆ ಬಂದಿದೆ ಎಂದು ಉನ್ನತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News