ಉಡುಪಿ: ಹಲವೆಡೆ ಗುಡುಗು ಸಹಿತ ಭಾರೀ ಮಳೆ
Update: 2022-04-10 14:56 GMT
ಉಡುಪಿ, ಎ.10: ಉಡುಪಿ ಜಿಲ್ಲೆಯ ಹಲವೆಡೆ ರವಿವಾರ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಉಡುಪಿ ನಗರ, ಕುಂದಾಪುರ ತಾಲೂಕು, ಕಾರ್ಕಳ, ಕಾಪು ತಾಲೂಕಿನ ಹಲವು ಕಡೆ ಸಿಡಿಲು ಗುಡುಗು ಸಹಿತ ಮಳೆಯಾಗಿದೆ. ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ- 2.4ಮಿ.ಮೀ., ಕಾಪು- 6.2ಮಿ.ಮೀ., ಕುಂದಾಪುರ- 0.1ಮಿ.ಮೀ., ಕಾರ್ಕಳ- 8.0ಮಿ.ಮೀ., ಹೆಬ್ರಿ- 5.2ಮಿ.ಮೀ. ಹಾಗೂ ಸರಾಸರಿ 3.0ಮಿ.ಮೀ. ಮಳೆಯಾಗಿದೆ.