ಉಡುಪಿ: ತಾಯಿ, ಮಗಳು ನಾಪತ್ತೆ
Update: 2022-04-17 15:24 GMT
ಉಡುಪಿ : ಬಟ್ಟೆ ತರುವುದಾಗಿ ಹೇಳಿ ಹೋದ ತಾಯಿ, ಮಗಳು ನಾಪತ್ತೆಯಾಗಿರುವ ಘಟನೆ ಎ.15ರಂದು ಅಪರಾಹ್ನ ವೇಳೆ ಉಡುಪಿಯ ಕುಂಜಿಬೆಟ್ಟು ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ವಲಸೆ ಕಾರ್ಮಿಕ, ಕುಂಜಿಬೆಟ್ಟು ಎಂಜಿಎಂ ಕಾಲೇಜು ಸಮೀಪದ ಡಿಸಿಎಂ ಕಾಲನಿಯ ಬಾಡಿಗೆ ಮನೆ ನಿವಾಸಿ ಮುತ್ತಪ್ಪ ಹನುಮಂತ ವಡ್ಡರ್ ಎಂಬವರ ಪತ್ನಿ ಪದ್ಮ (22) ಹಾಗೂ ಮಗಳು ಪ್ರಣತಿ(2) ಎಂದು ಗುರುತಿಸಲಾಗಿದೆ.
ಪದ್ಮ ಬಟ್ಟೆ ತರುವುದಾಗಿ ಹೇಳಿ, ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು, ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.