ಹಿರಿಯಡ್ಕ: ಮಕ್ಕಳ ಬಾಲವನ ಉದ್ಘಾಟನೆ

Update: 2022-04-18 12:41 GMT

ಹಿರಿಯಡ್ಕ : ಬೊಮ್ಮರಬೆಟ್ಟು ಗ್ರಾಪಂ ಹಿರಿಯಡಕ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಇವರ ಅನುದಾನದಿಂದ ನಿರ್ಮಿಸಲಾದ ಮಕ್ಕಳ ಬಾಲವನದ ಉದ್ಘಾಟನೆ ಇತ್ತೀಚೆಗೆ ಹಿರಿಯಡ್ಕದ ಗಾಂಧಿಮೈದಾನದಲ್ಲಿ ನಡೆಯಿತು.

ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಅವರು ಬಾಲವನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿರಿಯಡ್ಕ ಪರಿಸರದ ಅಭಿವೃದ್ಧಿಯ ಕುರಿತಂತೆ ತಮ್ಮ ಯೋಜನೆಗಳ ವಿವರಗಳನ್ನು ನೀಡಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಇಲ್ಲಿನ ಅಭಿವೃದ್ಧಿಗೆ ತನ್ನ ಕೈಲಾದ ಸಹಾಯ ಮಾಡುವ ಭರವಸೆ ನೀಡಿದರು. ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ಮುಂಡುಜೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಗಾಂಧಿ ಮೈದಾನದ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಅನುದಾನಕ್ಕೆ ಬೇಡಿಕೆ ಇಟ್ಟಿರುವುದಾಗಿ ನುಡಿದರು. 

ಹಿರಿಯಡ್ಕದ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ನಾರಾಯಮ ಜೆನ್ನಿ, ಯುವ ಉದ್ಯಮಿ ನಟರಾಜ್ ಹೆಗ್ಡೆ, ಅರುಣ್‌ ಕುಮಾರ್ ಜತ್ತನ್ನ, ನವೋದಯ ಫ್ರೆಂಡ್ಸ್‌ಕ್ಲಬ್‌ನ ಅಧ್ಯಕ್ಷ ನರಸಿಂಹ ಕಾಮತ್ ಉಪಸ್ಥಿತರಿದ್ದರು. ಶರತ್ ಜೆನ್ನಿ ಕಾರ್ಯಕ್ರಮ ನಿರೂಪಿಸಿದರೆ, ಪಿಡಿಓ ದಯಾನಂದ ಬೆನ್ನೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News