ಗ್ರಂಥಾಲಯಗಳ ಮೂಲಕ ಮಹಾನ್ ವ್ಯಕ್ತಿಗಳ ಸೃಷ್ಠಿಯಾಗಲಿ:‌ ಡಿಸಿ ಕೂರ್ಮಾರಾವ್

Update: 2022-04-18 15:13 GMT

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಗ್ರಂಥಾಲಯ ಕ್ಷೇತ್ರದಲ್ಲಿ ಈಗಾಗಲೇ ಮಾದರಿ ಕೆಲಸಗಳು ನಡೆದಿವೆ. ಡಾ.ಅಂಬೇಡ್ಕರ್, ಸ್ವಾಮಿ ವಿವೇಕಾನಂದ ರಂತಹ ಮಹಾನ್ ವ್ಯಕ್ತಿಗಳನ್ನು ರೂಪಿಸಿರುವುದು ಗ್ರಂಥಾಲಯಗಳು. ಆ ಮೂಲಕ ಇನ್ನಷ್ಟು ಮಹಾನ್ ವ್ಯಕ್ತಿಗಳನ್ನು ಸೃಷ್ಟಿಸುವಂತಹ ಕಾರ್ಯ ಆಗಬೇಕಾ ಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ವತಿಯಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಂಥಪಾಲಕರಿಗೆ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಎ.೧೮ರಂದು ಆಯೋಜಿಸಲಾದ ನಮ್ಮ ಗ್ರಂಥಾಲಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತ ನಾಡುತಿದ್ದರು.

ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಗ್ರಂಥಾಲಯಗಳು ಶೈಕ್ಷಣಿಕ, ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ಮತ್ತು ನಿರಂತರ ಕಾರ್ಯಚಟುವಟಿಕೆಯನ್ನು ಮಾಡುವ ಮೂಲಕ ಜ್ಞಾನ ಕೇಂದ್ರವಾಗಿ ಮಾರ್ಪಾಡಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್  ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ರಾಜ್ಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಮೂಲಕ ಓದುಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸ ಲಾಗಿದೆ. ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂಬ ಅಭಿಪ್ರಾಯ  ತಪ್ಪು. ಉತ್ತಮ ರೀತಿಯಲ್ಲಿ ನಡೆಸಲಾಗುವ ಗ್ರಂಥಾಲಯಗಳಲ್ಲಿ ಜನರು ಓದುವ ಹಂಬಲ ಹೊಂದಿದ್ದಾರೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಗದಗ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್ ತರಬೇತಿ ಪ್ರಕಟಣೆ ಮೇಲ್ವಿಚಾರಣೆ ಕೇಂದ್ರದ ನಿರ್ದೇಶಕ ಡಾ. ಅಬ್ದುಲ್ ಅಝೀಝ್ ಮುಲ್ಲಾ, ಗ್ರಂಥಾಲಯ ನಿರ್ವಹಣೆ  ಕುರಿತು ತರಬೇತಿಗಳ ಅಗತ್ಯ ಮತ್ತು ಮಹತ್ವದ ಬಗ್ಗೆ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಜಾಯಿಂಟ್ ಪ್ಲೇಸ್ಮೆಂಟ್ ಆಫೀಸರ್ ಭಾರ್ಗವ ಎಚ್.ಕೆ. ಗ್ರಂಥಾಲಯ ನಿರ್ವಹಣೆಯಲ್ಲಿ ಸಂವಹನ ಕೌಶಲ್ಯದ ಮಹತ್ವ ಕುರಿತು ಮಾತನಾಡಿದರು.‌

ಪುತ್ತೂರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ನ ಸಂಯೋಜಕ ಅಭಿಷೇಕ್, ಉತ್ತಮ ಗ್ರಂಥಾಲಯಗಳ ಮಾದರಿ ವಿಶ್ಲೇಷಣೆ ಬಗ್ಗೆ, ಜಿಪಂ ಯೋಜನಾ ನಿರ್ದೇಶಕ ಬಾಬು ಎಂ. ಗ್ರಂಥಾಲಯ ನಿರ್ವಹಣೆ ಸುತ್ತೋಲೆ ಮಾಹಿತಿ, ಕೇಂದ್ರ ಪುಸ್ತಕಗಳ ನೊಂದಣಿ ಬಗ್ಗೆ, ಜಿಲ್ಲಾ ಗ್ರಂಥಾಲಯಾಧಿಕಾರಿ ಜಯಶ್ರೀ  ಡಿಜಿಟಲ್ ಗ್ರಂಥಾಲಯ ನಿರ್ವಹಣೆ ಮತ್ತು ಪರಿಕರಗಳ ಬಳಕೆ ಕುರಿತು, ನಮ್ಮ ಭೂಮಿಯ ಸಂಯೋಜಕಿ ಕೃಪಾ ಭಟ್ ಕ್ರಿಯೇಟಿವ್ ಚೈಲ್ಡ್ ಫ್ರೆಂಡ್ಲಿ ಕ್ರಿಯೇ ಟಿವ್ ಸ್ಪೇಸ್ ಕುರಿತು ಮತ್ತು ರೀನಾ ಹೆಗ್ಡೆ ಡಿಜಿಟಲ್ ಗ್ರಂಥಾಲಯ ಪರಿಕಲ್ಪನೆ ಮತ್ತು ಕ್ರಿಯಾತ್ಮಕ ಅನುಷ್ಠಾನ ಕುರಿತು ಮಾಹಿತಿ ನೀಡಿದರು.

ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ಸ್ವಾಗತಿಸಿದರು. ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News