ಗ್ರಾಪಂ ಸದಸ್ಯರ ಸಮಸ್ಯೆ ಸರಿಪಡಿಸಲು ಕ್ರಮ: ಮಂಜುನಾಥ್ ಭಂಡಾರಿ

Update: 2022-04-22 14:54 GMT

ಉಡುಪಿ : ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕಾರ್ಕಳ ಮತ್ತು ಹೆಬ್ರಿ ಕ್ಷೇತ್ರದ ಹೆಬ್ರಿ, ಅಜೆಕಾರು, ಕುಕ್ಕುಂದೂರು, ಬಜಗೋಳಿ ಜಿಲ್ಲಾ ಪಂಚಾಯಿತ್ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಮಟ್ಟದಲ್ಲಿ ಪಕ್ಷದ ಪ್ರತಿನಿಧಿಗಳು, ಮುಖ್ಯ ಕಾರ್ಯಕರ್ತರು, ನಾಯಕರುಗಳ ಜೊತೆ ಸಭೆ ನಡೆಸಿದರು.

ಈ ಮುಖಾಮುಖಿ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಎದುರಿ ಸುತ್ತಿರುವ ಲೋಪದೋಷಗಳ ಕುರಿತು ಮಂಜುನಾಥ್ ಭಂಡಾರಿ ಅವರ  ಗಮನ ಸೆಳೆದರು. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ಅವರು ನೀಡಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ರೋಶ್ನಿ ಒಲಿವೇರಾ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ಸುಧಾಕರ್ ಕೋಟ್ಯಾನ್ ಮತ್ತು ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಚ್.ಶೇಖರ ಮಡಿವಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News