ಉದ್ನಾ ಜಂಕ್ಷನ್- ಮಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲು
ಉಡುಪಿ : ಬೇಸಿಗೆಕಾಲದಲ್ಲಿ ಪ್ರಯಾಣಿಸುವವರ ಹೆಚ್ಚಳವನ್ನು ಗಮನಿಸಿ ಕೊಂಕಣ ರೈಲ್ವೆ ಉದ್ನಾ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ವಿಶೇಷ ದರದಲ್ಲಿ ಸಾಪ್ತಾಹಿಕ ವಿಶೇಷ ರೈಲೊಂದನ್ನು ಓಡಿಸಲು ನಿರ್ಧರಿಸಿದೆ.
ರೈಲು ನಂ.೦೯೦೫೭ ಉದ್ನಾ ಜಂಕ್ಷನ್- ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ವಿಶೇಷ ಟಿಕೇಟ್ ದರದೊಂದಿಗೆ ಮೇ೧ರಿಂದ ಜೂನ್ ೧೨ರವರೆಗೆ ಪ್ರತಿ ರವಿವಾರ ಉದ್ನಾ ಜಂಕ್ಷನ್‌ನಿಂದ ರಾತ್ರಿ 8 ಗಂಟೆಗೆ ಹೊರಡಲಿದ್ದು ಮಂಗಳೂರು ಜಂಕ್ಷನ್‌ನ್ನು ಮರುದಿನ ಸಂಜೆ ೬:೧೫ಕ್ಕೆ ತಲುಪಲಿದೆ.
ಅದೇ ರೀತಿ ರೈಲು ನಂ.೦೯೦೫೮ ಮಂಗಳೂರು ಜಂಕ್ಷನ್-ಉದ್ನಾ ಜಂಕ್ಷನ್ ವಿಶೇಷ ಸಾಪ್ತಾಹಿಕ ರೈಲು ವಿಶೇಷ ಟಿಕೇಟ್ ದರದೊಂದಿಗೆ ಮೇ ೨ರಿಂದ ಜೂ.೧೩ರವರೆಗೆ ಪ್ರತಿ ಸೋಮವಾರ ರಾತ್ರಿ ೭:೪೫ಕ್ಕೆ ಹೊರಡಲಿದ್ದು, ಮರುದಿನ ಸಂಜೆ ೭:೦೦ ಗಂಟೆಗೆ ಉದ್ನಾ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ವಲ್ಸಾಡ್, ವಾಪಿ, ವಸೈ ರೋಡ್, ಪನ್ವೇಲ್, ರೋಹಾ, ಮಂಗಾವ್, ವೀರ್, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ ರೋಡ್, ವೈಭವವಾಡಿ ರೋಡ್, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರಕೂರು, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ಸ್ಟೇಶನ್ ಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲು ೨೨ ಕೋಚ್‌ಗಳನ್ನು ಒಳಗೊಂಡಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.